ಮಳೆಗಾಲ ಅಧಿವೇಶನ | ಕೋಲಾಹಲ ಸೃಷ್ಟಿಸಲಿದೆಯೇ ʼ40% ಕಮಿಷನ್‌ ಮತ್ತು ಕಾಂಗ್ರೆಸ್‌ ಸರ್ಕಾರದ ನೇಮಕಾತಿ ವಿವಾದ?

kageri
  • ಸಿದ್ದರಾಮಯ್ಯ, ಪಿ ರಾಜೀವ್‌ ಅವರ ಮನವಿ ಪುರಸ್ಕರಿಸಿದ ಸಭಾಧ್ಯಕ್ಷ ಕಾಗೇರಿ
  • ನಿಯಮ 69ರಡಿ ಎರಡು ವಿಚಾರಗಳ ಬಗ್ಗೆ ಚರ್ಚೆ, ಹೆಚ್ಚಿದ ಸದನದ ಕುತೂಹಲ 

ʼ40 ಪರ್ಸೆಂಟ್‌ ಕಮಿಷನ್‌ʼ ಮತ್ತು 2013ರಿಂದ 2018 ಅವಧಿಯಲ್ಲಿ ನಡೆದ ಸರ್ಕಾರಿ ನೇಮಕಾತಿ ವಿಚಾರ ಬುಧವಾರದ ವಿಧಾನಸಭೆ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ. 

ಅಕ್ರಮ ಕುರಿತಂತೆ ಚರ್ಚೆಗೆ ಸಿದ್ದರಾಮಯ್ಯ ಮತ್ತು ಪಿ ರಾಜೀವ್‌ ಅವರ ಮನವಿ ಪುರಸ್ಕರಿಸಿರುವ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಕಾಶ ಮಾಡಿಕೊಟ್ಟಿದ್ದು, ಸದನದ ಕುತೂಹಲ ಹೆಚ್ಚಿಸಿದೆ. 

ಪ್ರಶ್ನೋತ್ತರ ಕಲಾಪದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ ʼ40 ಪರ್ಸೆಂಟ್‌ ಕಮಿಷನ್‌ʼ ಕುರಿತು ಚರ್ಚಿಸಲು ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ 60ನೇ ನಿಯಮದ ನಿಲುವಳಿ ಸೂಚಿಸಿದ್ದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಿದ್ದರಾಮಯ್ಯ ಅವರ ನಿಲುವಳಿ ನಿಯಮ 60 ತಿರಸ್ಕರಿಸಿ, ನಿಯಮ 69ರಡಿ ಚರ್ಚಿಸಲು ಅವಕಾಶ ಮಾಡಿಕೊಟ್ಟರು. ಅದೇ ಸಮಯದಲ್ಲಿ ಬಿಜೆಪಿ ಶಾಸಕ ಪಿ. ರಾಜೀವ್‌ ಕೂಡ 2013ರಿಂದ 2018ರವರೆಗಿನ ಅಕ್ರಮ ನೇಮಕಾತಿ ಬಗ್ಗೆ ಚರ್ಚಿಸಲು ನಿಯಮ 69ರಡಿ ಅವಕಾಶ ಕೋರಿದರು. ಸಭಾಧ್ಯಕ್ಷರು ಇದಕ್ಕೂ ಅವಕಾಶ ಮಾಡಿಕೊಟ್ಟರು. ಈಗ ಎರಡು ವಿಚಾರಗಳು ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಾಯಕರ ಮಧ್ಯೆ ತೀವ್ರ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಅಭಿಯಾನ: 'ಪೇ ಸಿಎಂ’ ಎಂದು ಪೋಸ್ಟರ್ ಅಂಟಿಸಿ ಅಣಕ

ಹಾಗೆಯೇ ಸಿದ್ದರಾಮಯ್ಯ ಅವರು ಇದೇ ವೇಳೆ ಸಭಾಧ್ಯಕ್ಷರಿಗೆ ಮನವಿ ಮಾಡಿ, “2006ರಿಂದ ಈವರೆಗೂ ನಡೆದ ಸರ್ಕಾರಿ ನೇಮಕಾತಿ ಹಗರಣ ಬಗ್ಗೆ ಚರ್ಚೆಯಾಗಲಿ. ಜೊತೆಗೆ ಈ ಬಗ್ಗೆ ನ್ಯಾಯಾಲಯ ನೇತೃತ್ವದಲ್ಲಿ ಸಮಿತಿ ರಚನೆಯಾಗಬೇಕು” ಎಂದು ಒತ್ತಾಯಿಸಿದರು. ಒಟ್ಟಾರೆಯಾಘಿ ಮಧ್ಯಾಹ್ನದ ಸದನ ಕಾವೇರಲಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180