'ನನ್ನ ಸ್ವಾತಂತ್ರ್ಯ ದಿನಾಚರಣೆ ಹೀಗಿತ್ತು': 'ಮುಸ್ಲಿಂ' ಆಗಿದ್ದಕ್ಕೆ ಮನೆ ನಿರಾಕರಿಸಿದ್ದನ್ನು ಹಂಚಿಕೊಂಡ ಬೆಂಗಳೂರಿನ ಮಹಿಳೆ

Muslim Women
  • ಮನೆ ಮಾಲೀಕರೊಂದಿಗೆ 'ಚಾಟಿಂಗ್‌ನ ಸ್ಕ್ರೀನ್‌ಶಾಟ್‌' ಹಂಚಿಕೊಂಡ ಮುಸ್ಲಿಂ ಮಹಿಳೆ
  • ಧಾರ್ಮಿಕ ತಾರತಮ್ಯದ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಲು ನೆಟ್ಟಿಗರ ಸಲಹೆ

"ಎಲ್ಲರೂ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಿದರೆ, ನಾನು ನನ್ನ ಆಗಸ್ಟ್ 15 ಅನ್ನು ಹೇಗೆ ಕಳೆದಿದ್ದೇನೆ ಎಂಬುದನ್ನು ನೋಡಿ" ಎನ್ನುತ್ತಾ ಮುಸ್ಲಿಂ ಮಹಿಳೆಯೊಬ್ಬರು 'ಮುಸ್ಲಿಂ' ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಮನೆ ನಿರಾಕರಿಸಿರುವ ಘಟನೆಯೊಂದನ್ನು 'ಸೋಷಿಯಲ್ ಮೀಡಿಯಾ'ದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮನೆಗಾಗಿ ಹುಡುಕಾಟ ನಡೆಸುತ್ತಿರುವ ಹೈಫಾ ಎಂಬವರು, ತಾನು ಮುಸ್ಲಿಂ ಎಂಬ ಕಾರಣಕ್ಕೆ ಮನೆಯ ಮಾಲೀಕರು ಮನೆಯನ್ನು ನಿರಾಕರಣೆ ಮಾಡಿ, ಉತ್ತರ ನೀಡಿರುವ ಸಂದೇಶದ 'ಸ್ಕ್ರೀನ್‌ಶಾಟ್‌' ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಸಂದೇಶದಲ್ಲಿ ನಿಮ್ಮ ಹೆಸರೇನು ಎಂದು ಪ್ರಶ್ನಿಸಿದ ಬಳಿಕ, ಹೈಫಾ ಎಂದು ಉತ್ತರ ನೀಡಿದ್ದಾರೆ. ನೀವು ಹಿಂದೂ ಕುಟುಂಬದವರೇ? ಅದಕ್ಕೆ 'ಅಲ್ಲ' ಎಂದು ಮರು ಉತ್ತರ ನೀಡಿ, ಬಳಿಕ ಒಕೆ ಎಂದಿದ್ದರು. ಆ ಬಳಿಕ ಏನಾದರೂ ಸಮಸ್ಯೆಯೇ ಎಂದು ಹೈಫಾ ಪ್ರಶ್ನಿಸಿದಾಗ, 'ಹೌದು' ಎಂದುತ್ತರಿಸಿರುವ ಅವರು, ಹಾಗಾದರೆ ಮನೆ ಲಭ್ಯವಿಲ್ಲವೇ? ಎಂದು ಮತ್ತೆ ಮುಸ್ಲಿಂ ಮಹಿಳೆ ಕೇಳಿದಾಗ, ಮನೆ ಲಭ್ಯವಿದೆ. ಆದರೆ 'ಮಾಲೀಕರು ಹಿಂದೂ ಕುಟುಂಬಕ್ಕೆ ನೀಡೋದು' ಎಂದು ಬಳಿಕ ಉತ್ತರ ಬಂದಿದೆ.

ಸಾಮಾಜಿಕ ಮಾಧ್ಯಮದಲ್ಲಿ ಮನೆ ಮಾಲೀಕರೊಂದಿಗೆ ಸಂವಾದದ ತುಣುಕುಗಳನ್ನು ಹಂಚಿಕೊಂಡಿರುವ ಹೈಫಾ, 'ಎಲ್ಲರೂ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸಿದರೆ, ನಾನು ನನ್ನ ಆಗಸ್ಟ್ 15 ಅನ್ನು ಹೇಗೆ ಕಳೆದಿದ್ದೇನೆ ಎಂಬುದನ್ನು ನೋಡಿ" ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಈ ಟ್ವೀಟ್ ವೈರಲ್ ಆಗಿದ್ದು, ಹಲವು ಬಳಕೆದಾರರು 'ಧಾರ್ಮಿಕ ತಾರತಮ್ಯದ ಆಧಾರದ ಮೇಲೆ ಆಕೆ ಪೊಲೀಸರಿಗೆ ದೂರು ನೀಡಿ' ಎಂದು ಕೆಲವರು ಸಲಹೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್