ದೇಶವನ್ನು ರಕ್ಷಿಸುವುದು ನನ್ನ ಕರ್ತವ್ಯ: ದೇಶದ್ರೋಹ ಕಾನೂನಿನ ವಿರುದ್ಧದ ಅರ್ಜಿದಾರ

  • ದೇಶದ್ರೋಹ ಕಾನೂನಿನ ಕುರಿತು ಸುಪ್ರೀಂ ಐತಿಹಾಸಿಕ ತೀರ್ಪು
  • ಕಾನೂನು ಸಂವಿಧಾನದ 19(ಎ), 14 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ

ಒಬ್ಬ ಸೈನಿಕನಾಗಿ ದೇಶವನ್ನು ಮತ್ತು ಸಂವಿಧಾನವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಸೆಕ್ಷನ್ 124ಎ (ದೇಶದ್ರೋಹ ಕಾನೂನು)ಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ನಿವೃತ್ತ ಮೇಜರ್ ಜನರಲ್ ಸುಧೀರ್ ವೊಂಬತ್ಕೆರೆ ಹೇಳಿದ್ದಾರೆ.

ಇತ್ತೀಚೆಗೆ, ದೇಶದ್ರೋಹದ ಹೆಸರಿನಲ್ಲಿ ಯಾವುದೇ ಹೊಸ ಎಫ್‌ಐಆರ್‌ಗಳನ್ನು ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ಮಧ್ಯಂತರ ತೀರ್ಪು ನೀಡಿದೆ. ಈ ಬಳಿಕ ತಮ್ಮ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿರುವ ಸುಧೀರ್‌, "ದೇಶವನ್ನು ರಕ್ಷಿಸುವುದು ನಮ್ಮ ಕರ್ತವ್ಯ" ಎಂದು ಹೇಳಿದ್ದಾರೆ.

“ಒಬ್ಬ ಸೈನಿಕನಾಗಿ ಸಂವಿಧಾನವನ್ನು ರಕ್ಷಿಸುವುದು ನನ್ನ ಕರ್ತವ್ಯ. ದೇಶದ್ರೋಹದ ಕಾನೂನು ಸಮಾನತೆಯ ಹಕ್ಕು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಗೆ ಸಂಬಂಧಿಸಿದ 19 (ಎ), 14 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ” ಎಂದು ಅವರು ಹೇಳಿದ್ದಾರೆ. 

ದೇಶದಲ್ಲಿ 800 ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಕಾನೂನಿನ ಅಡಿಯಲ್ಲಿ 13,000 ಜನರು ದೇಶದ್ರೋಹದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ.

ಮೈಸೂರಿನವರಾದ ಸುಧೀರ್ ವೊಂಬತ್ಕೆರೆ ಮತ್ತು ಇತರರು ಜುಲೈ 2021ರಲ್ಲಿ ದೇಶದ್ರೋಹದ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. "ವಸಾಹತುಶಾಹಿ ಕಾಲದ ಕಾನೂನನ್ನು ಸ್ವತಂತ್ರ್ಯ ಭಾರತದಲ್ಲೂ ಸರ್ಕಾರಗಳು ಬಳಸುತ್ತಿರುವುದು ದೊಡ್ಡ ಅನ್ಯಾಯ" ಎಂದು ಅವರು ವಾದಿಸಿದ್ದರು. 

ಈ ಸುದ್ದಿ ಓದಿದ್ದೀರಾ?: ದೇಶದ್ರೋಹ ಕಾಯ್ದೆಗೆ ತಾತ್ಕಾಲಿಕ ತಡೆ; ಸುಪ್ರೀಂಕೋರ್ಟ್‌ನ ಐತಿಹಾಸಿಕ ನಿರ್ಧಾರ

ಅರ್ಜಿಯನ್ನು ಆಲಿಸಿದ್ದ ಸುಪ್ರೀ ಕೋರ್ಟ್‌, "ದೇಶದ್ರೋಹ ಕಾನೂನಿನ ಅಡಿಯಲ್ಲಿ ಹೊಸ ಪ್ರಕರಣಗಳನ್ನು ದಾಖಲಿಸುವಂತಿಲ್ಲ. ದೇಶದ್ರೋಹ ಆರೋಪ ಹೊರಿಸಲಾದ ಎಲ್ಲಾ ಬಾಕಿ ಪ್ರಕರಣಗಳನ್ನು ತಡೆಹಿಡಿಯಲಾಗುತ್ತದೆ. ಸೆಕ್ಷನ್ 124A ಅಡಿಯಲ್ಲಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವವರು ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು" ಎಂದು ಹೇಳಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್