ಮೈಸೂರು |ರಾಷ್ಟ್ರಧ್ವಜವನ್ನು ಫ್ಲೆಕ್ಸ್‌ನಂತೆ ಮುದ್ರಿಸಿ ಗೌರವ ಕಳೆಯುತ್ತಿದ್ದಾರೆ: ಜಸ್ಪಿಸ್‌ ನಾಗಮೋಹನ್ ದಾಸ್

National Flag
  • ‘ಪ್ರಜಾಪ್ರಭುತ್ವ ಉಳಿವಿಗಾಗಿ ಸಂವಿಧಾನ' ಕಾರ್ಯಕ್ರಮದಲ್ಲಿ ಭಾಗಿ
  • ‘ಧ್ವಜದ ಗೌರವಕ್ಕೆ ಕಪ್ಪು ಮಸಿ ಬಳಿಯುವ ಕೆಲಸ ನಡೆಯುತ್ತಿದೆ’

ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಹತ್ತಿ, ರೇಷ್ಮೆ ಬಟ್ಟೆ ಬಳಸಿ ರಾಷ್ಟ್ರಧ್ವಜವನ್ನು ತಯಾರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಾಷ್ಟ್ರಧ್ವಜವನ್ನು ಫ್ಲೆಕ್ಸ್ ನಂತೆ ಮುದ್ರಿಸಿ ಅದರ ಗೌರವವನ್ನು ಹಾಳು ಮಾಡುತ್ತಿದ್ದಾರೆ” ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದ್ದಾರೆ.

ಮೈಸೂರಿನ ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ‘ಪ್ರಜಾಪ್ರಭುತ್ವ ಉಳಿವಿಗಾಗಿ ಸಂವಿಧಾನ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ನಾಗಪುರದ ಆರ್‍‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ 52 ವರ್ಷ ಧ್ವಜಾರೋಹಣವನ್ನೇ ಮಾಡಿರಲಿಲ್ಲ. 2001ರಲ್ಲಿ ಹೆಗಡೆವಾರ್ ಜನ್ಮ ದಿನಾಚರಣೆ ವೇಳೆ ಧ್ವಜಾರೋಹಣ ಮಾಡಿದ್ದಕ್ಕಾಗಿ ಮೂವರು ಯುವಕರನ್ನು 12 ವರ್ಷ ಜೈಲಿಗೆ ಹಾಕಲಾಗಿತ್ತು. ನಂತರದ ದಿನಗಳಲ್ಲಿ ನೆಪ ಮಾತ್ರಕ್ಕೆ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚಾಮರಾಜನಗರ | ಅರಣ್ಯಾಧಿಕಾರಿ ವರ್ಗಾವಣೆ ವಿರೋಧಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

“ರಾಷ್ಟ್ರಧ್ವಜದ ಬಗ್ಗೆ ಗೌರವವಿಲ್ಲದವರು ಈಗ ಅದೇ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶದಲ್ಲಿ ದೊಡ್ಡ ಚಳುವಳಿ ನಡೆಸುವಂತೆ ಬಿಂಬಿಸುತ್ತಿದ್ದಾರೆ. ಆ ಮೂಲಕ ದೇಶದಲ್ಲಿ ಯಾವುದೋ ಹುನ್ನಾರ ನಡೆಸುತ್ತಿದ್ದಾರೆ. ಇದರ ಜತೆಗೆ ಧ್ವಜದ ಗೌರವಕ್ಕೆ ಕಪ್ಪು ಮಸಿ ಬಳಿಯುತ್ತಿದ್ದಾರೆ” ಎಂದು ನ್ಯಾಯಮೂರ್ತಿಗಳು ದೂರಿದ್ದಾರೆ.

“ಆರ್‍‌ಎಸ್‌ಎಸ್ ಸರ ಸಂಚಾಲಕ ಮೋಹನ್ ಭಾಗವತ್ ಅವರು ತಮ್ಮ ಟ್ವಿಟರ್‍‌ ಖಾತೆಯ ಡಿಪಿಯಲ್ಲಿ ರಾಷ್ಟ್ರಧ್ವಜ ಚಿತ್ರಗಳನ್ನು ಹಾಕಿಲ್ಲ. ತಮ್ಮ ನಾಯಕನ (ಮೋದಿ) ಕರೆಯನ್ನು ಅವರ ಪಕ್ಷದವರೇ ಪಾಲಿಸುವುದಿಲ್ಲ. ಉಳಿದವರಿಗೆ ಪಾಠ ಮಾಡುತ್ತಾರೆ” ಎಂದು ದಿನೇಶ್‌ ಅಮೀನ್‌ ಮಟ್ಟು ಕಿಡಿಕಾರಿದರು.

ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್