ಮೈಸೂರು | ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಎಂಸಿಸಿ ಕಂದಾಯ ಅಧಿಕಾರಿ

  • ಕಂದಾಯ ನಿರೀಕ್ಷಕರಾಗಿ ಹೆಚ್ಚುವರಿ ಹೊಣೆ ಹೊತ್ತಿದ್ದ ಪ್ರಥಮ ದರ್ಜೆ ಸಹಾಯಕ
  • ಖಾತಾ ಬದಲಾವಣೆಗೆ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ

ಖಾತೆ ಬದಲಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಮೈಸೂರಿನ ಸರ್ಕಾರಿ ಅಧಿಕಾರಿಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಂಧಿಸಿದೆ.

ಮೈಸೂರು ಮಹಾನಗರ ಪಾಲಿಕೆಯ (ಎಂಸಿಸಿ) ವಲಯ-8ರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಬಿ ಸಿದ್ದರಾಜು ಅವರನ್ನು ಎಸಿಬಿ ಅಧಿಕಾರಿಗಳು ಸಾಕ್ಷಿ ಸಮೇತ ಹಿಡಿದ್ದಾರೆ. 

"ಸಿದ್ದರಾಜು ಅವರು ಕಂದಾಯ ನಿರೀಕ್ಷಕರಾಗಿ ಹೆಚ್ಚುವರಿ ಹೊಣೆ ಹೊತ್ತಿದ್ದರು. ಖಾತಾ ಬದಲಾವಣೆ ಮಾಡಿಕೊಡಲು ವ್ಯಕ್ತಿಯೊಬ್ಬರ ಬಳಿ 15 ಸಾವಿರ ರೂ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಆ ವ್ಯಕ್ತಿ ದೂರು ನೀಡಿದ್ದರು. ದೂರುದಾರನೊಂದಿಗೆ ಎಂಸಿಸಿ ಕಚೇರಿಗೆ ತೆರಳಿದ ಅಧಿಕಾರಿಗಳು, ದೂರುದಾರಿಂದ ಹಣ ಪಡೆಯುತ್ತಿದ್ದಾಗ ಸಿದ್ಧರಾಜು ಅವರನ್ನು ಸಾಕ್ಷಿ ಸಮೇತ ಹಿಡಿದ್ದಿದ್ದಾಗಿ" ಎಸಿಬಿ ಪೊಲೀಸ್ ಅಧೀಕ್ಷಕ ವಿಜೆ ಸಜೀತ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಶ್ರೀರಂಗಪಟ್ಟಣದ ದರಿಯಾ ದೌಲತ್ ವೀಕ್ಷಣೆಗೆ ಉಚಿತ ಪ್ರವೇಶ

"ಖಾತಾವನ್ನು ತನ್ನ ಸ್ನೇಹಿತನ ಹೆಸರಿಗೆ ವರ್ಗಾಯಿಸಲು ದೂರುದಾರ ಎಂಸಿಸಿ ಕಚೇರಿಗೆ ಆಗಸ್ಟ್‌ 3ರಂದು ತೆರಳಿದ್ದರು. ಆ ವೇಳೆ, ಸಿದ್ಧರಾಜು ಲಂಚಕ್ಕೆ ಬೇಡಿಕೆ ಇಟ್ಟಿದ್ದರು" ಎಂದು ಪೊಲೀಸರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180