ಮೈಸೂರು | ಮುರುಘಾ ಮಠ ಅತ್ಯಾಚಾರ ಪ್ರಕರಣ: ನ.15ಕ್ಕೆ ಪ್ರಗತಿಪರ ಸಂಘಟನೆಗಳ ಸಭೆ

Mysore
  • ಒಡನಾಡಿ ಸಂಸ್ಥೆಗೆ ನೈತಿಕ ಬಲ ತುಂಬುವ ಉದ್ದೇಶ
  • ಸಭೆಯಲ್ಲಿ ರೈತ, ದಲಿತ, ಮಹಿಳಾ, ಸಂಘಟನೆಗಳು ಭಾಗಿ

ಮುರುಘಾ ಮಠದಲ್ಲಾದ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ, ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಆರೋಪಿ ಮುರುಘಾಶ್ರೀ ಕ್ರೌರ್ಯಗಳು ಹಾಗೂ ಎಲ್ಲ ಬೆಳವಣಿಗೆಗಳ ಕುರಿತು ಚರ್ಚಿಸಲು, ಒಡನಾಡಿ ಸಂಸ್ಥೆ ಹಾಗೂ ಸಂತ್ರಸ್ತೆಯರ ಕುಟುಂಬಗಳಿಗೆ ನೈತಿಕ ಬಲ ತುಂಬುವ ಉದ್ದೇಶದಿಂದ ಪ್ರಗತಿಪರ ಸಂಘಟನೆಗಳು ನವೆಂಬರ್ 15ರಂದು ಮೈಸೂರಿನಲ್ಲಿ ಸಭೆ ಕರೆದಿವೆ. 

ಮೈಸೂರಿನ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯ ಕಚೇರಿಯಲ್ಲಿ ಸಭೆ ನಡೆಯಲಿದ್ದು, ರೈತ, ದಲಿತ, ಮಹಿಳಾ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. 

Eedina App

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ  ಕಾಮಪಿಪಾಸು, ಆರೋಪಿ ಮುರುಘಾಶ್ರೀ ವಿರುದ್ಧ ದೂರು ನೀಡಿದವರ ಮೇಲೆ ಹಿಂಸೆ ನೀಡಿ, ಪ್ರಕರಣದ ವಿಚಾರಣೆಯ ದಾರಿ ತಪ್ಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಳಿ ಬರುತ್ತಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲು ಸಂಘಟಕರು ನಿರ್ಧರಿಸಿದ್ದಾರೆ. 

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಮೈಸೂರು ಜಿಲ್ಲೆ ಕರ್ನಾಟಕ ರಾಜ ರೈತ ಸಂಘದ ಮುಖಂಡ ಹೊಸಕೋಟೆ ಬಸವರಾಜ್, ”ಭಯ ಹುಟ್ಟಿಸುವ ಉದ್ದೇಶದಿಂದ ದೂರು ನೀಡಿದವರ ಮೇಲೆಯೇ ಪ್ರಕರಣ ದಾಖಲಿಸಿ ಠಾಣೆಗೆ ಕರೆಯಲಾಗಿದೆ. ಸಂತ್ರಸ್ತೆಯರ ಕುಟುಂಬಕ್ಕೆ ರಕ್ಷಣೆ ಕೊಡುವಲ್ಲಿ ಸರ್ಕಾರ ಹಿಂದೇಟು ಹಾಕಿದೆ. ಕುಟುಂಬಕ್ಕೆ ಧೈರ್ಯ ನೀಡುವ ಉದ್ದೇಶದಿಂದ ಸಭೆ ಕರೆಯಲಾಗಿದೆ” ಎಂದರು.

AV Eye Hospital ad

ಈ ಸುದ್ದಿ ಓದಿದ್ದೀರಾ?: ಮುರುಘಾ ಶ್ರೀ ಪ್ರಕರಣ | ಶಿವಮೂರ್ತಿ ಸ್ವಾಮೀಜಿಗೆ ನ.21ರವರೆಗೆ ನ್ಯಾಯಾಂಗ ಬಂಧನ

“ಒಡನಾಡಿ ಸಂಸ್ಥೆ ಸುಮಾರು 40 ವರ್ಷದಿಂದ ಸಮಾಜದಲ್ಲಿ ಕಡೆಗಣಿಸಲ್ಪಟ್ಟವರ ಪರ ಹೋರಾಟ ಮಾಡುತ್ತಾ ಬಂದಿದೆ. ಅವರಿಗೆ ನೈತಿಕ ಬಲ ತುಂಬಬೇಕಾದುದು ನಮ್ಮೆಲ್ಲರ ಕರ್ತವ್ಯ. ವಾಸ್ತವಿಕವಾಗಿ ನಡೆದುದೇನು, ಇಲ್ಲಿಯವರೆಗೆ ಏನೆಲ್ಲ ಆಗಿದೆ, ಮುಂದೆ ನಾವು ಏನು ಮಾಡಬೇಕು, ಉನ್ನತ ತನಿಖೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡುವುದರ ಬಗ್ಗೆ ಹೀಗೆ ಎಲ್ಲ ರೀತಿಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ” ಎಂದರು.

“ಮಠದಲ್ಲಿ ಸುಮಾರು 20 ವರ್ಷದಿಂದ ಈ ರೀತಿಯ ಘಟನೆಗಳು ನಡೆಯುತ್ತಿದೆ ಎನ್ನಲಾಗುತ್ತಿದೆ. ಇವೆಲ್ಲದರ ಬಗ್ಗೆ ತನಿಖೆ ಮಾಡುವಂತೆ ಸಿಬಿಐಗೆ ಒತ್ತಾಯ ಮಾಡಬೇಕು. ಸಭೆಯಲ್ಲಿ ಸುಮಾರು 50 ರಿಂದ 60 ಜನರು ಭಾಗವಹಿಸುವ ನಿರೀಕ್ಷೆಯಿದೆ” ಎಂದರು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app