ಮೈಸೂರು | ಜೆಡಿಎಸ್‌ ತೊರೆದ ಎಂಎಲ್‌ಸಿ ಮರಿತಿಬ್ಬೇಗೌಡ

ಮೈಸೂರು:"ಜೆಡಿಎಸ್ ಮತ್ತೊಂದು ವಿಕೆಟ್ ಪತನ"
  • "ಪಕ್ಷದಲ್ಲಿ ನಿಷ್ಟಾವಂತರಾಗಿ ದುಡಿದವರನ್ನು ಬಿಟ್ಟು, ದುಡ್ಡಿದ್ದವರಿಗೆ ಮಣೆ"
  • "ಪದವೀಧರರ ಕ್ಷೇತ್ರದಿಂದ ಜಯರಾಂಗೆ ಟಿಕೆಟ್ ನೀಡದಿರುವುದು ಬೇಸರ"

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಜಾತ್ಯಾತೀತ ಜನತಾದಳ (ಜೆಡಿಎಸ್‌) ತೊರೆದಿದ್ದಾರೆ. ಪಕ್ಷದ ನಾಯಕರ ವರ್ತನೆಯಿಂದ ಬೇಸತ್ತು ಪಕ್ಷ ತೊರೆದಿರುವುದಾಗಿ ಅವರು ಹೇಳಿದ್ದಾರೆ. 

ಮೈಸೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕುಮಾರಸ್ವಾಮಿಯವರಿಗೆ ನಿಷ್ಟಾವಂತ ಕಾರ್ಯಕರ್ತರ ಅಗತ್ಯವಿಲ್ಲ. ಅವರು ದುಡ್ಡು ಇದ್ದವರಿಗೆ ಟಿಕೆಟ್ ನೀಡುತ್ತಿದ್ದಾರೆ. ಪಕ್ಷದಲ್ಲಿ ಹಿರಿಯರಾದ ದೇವೆಗೌಡರ ಮಾತು ನಡೆಯುದಿಲ್ಲ. ಕುಮಾರಸ್ವಾಮಿ ಅವರಿಗೆ ನಾಯಕತ್ವ ನೀಡಿದ ನಂತರ ಪಕ್ಷ ಸೊರಗಿದೆ" ಎಂದು ಅವರು ಆರೋಪಿಸಿದ್ದಾರೆ. 

Eedina App

“ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಕುಮಾರಸ್ವಾಮಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದ ಕಿಲ್ಲಾರ ಜಯರಾಂ ಅವರಿಗೆ ಪದವೀಧರರ ಕ್ಷೇತ್ರದಿಂದ ಟಿಕೆಟ್ ನೀಡದೆ, ಪಕ್ಷದವರಲ್ಲದ ಹಣವಿರುವ ರಾಮು ಅವರಿಗೆ ಟಿಕೆಟ್ ನೀಡಿದ್ದಾರೆ. ಈ ನಡೆಯಿಂದ ನನಗೆ ಬೇಸರವಾಗಿದೆ” ಎಂದು ಮರಿತಿಬ್ಬೇಗೌಡ ಹೇಳಿದ್ದಾರೆ. 

ಈ ಸುದ್ದಿಯನ್ನು ಓದಿ : ಅಯ್ಯೋ.. ಕರ್ನಾಟಕ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ: ಎಚ್‌ಡಿಕೆ ಆತಂಕ

AV Eye Hospital ad

“ನನಗೆ ಎರಡು ಚುನಾವಣೆಯಲ್ಲಿ ಜೆಡಿಎಸ್‌ನಿಂದ ಬಿ ಫಾರಂ ಕೊಟ್ಟರು. ಆದರೆ, ದೇವೇಗೌಡರಾಗಿಲೀ, ಕುಮಾರಸ್ವಾಮಿಯಾಗಿಲೀ ಚುನಾವಣೆಗಳಲ್ಲಿ ನನ್ನ ಪರವಾಗಿ ಒಂದು ದಿನವೂ ಪ್ರಚಾರಕ್ಕೆ ಬರಲಿಲ್ಲ. ಟಿಕೆಟ್ ಕೊಟ್ಟು ನನ್ನ ಸೋಲಿಸುವ ಯತ್ನವನ್ನು ಮಾಡಿದರು. ಆದರೂ ನಾನು ಗೆಲುವು ಸಾಧಿಸಿದೆ" ಎಂದು ಅವರು ತಿಳಿಸಿದ್ದಾರೆ. 

"ಪದವೀಧರ ಕ್ಷೇತ್ರದಲ್ಲಿ ರಾಮುಗೆ ಯಾವ ಮಾನದಂಡದಲ್ಲಿ ಟಿಕೆಟ್ ಕೊಟ್ಟಿರಿ.? ಜೆಡಿಎಸ್‌ನಲ್ಲಿ ದುಡ್ಡೇ ಮಾನದಂಡವಾ..? ಪಕ್ಷಕ್ಕಾಗಿ ದುಡಿದದ್ದು ಮಾನದಂಡ ಅಲ್ವಾ.? 30 ವರ್ಷದಿಂದ ಜಯರಾಂ ಪಕ್ಷಕ್ಕಾಗಿ ದುಡಿದಿದ್ದಾರೆ” ಎಂದು ಅಸಮಾಧಾನ ಹೊರಹಾಕಿದ್ದಾರೆ. 

“ರಾಜ್ಯದಲ್ಲಿ ಸದೃಡ ಪ್ರಾದೇಶಿಕ ಪಕ್ಷ ಕಟ್ಟುವ ಉದ್ದೇಶದಿಂದ ದೇವೆಗೌಡರ ನೇತೃತ್ವದಲ್ಲಿ ಜೆಡಿಎಸ್‌ ಸೇರಿದ್ದೆ. ಆದರೆ, ಈಗ ನನಗೆ ಭ್ರಮನಿರಸವಾಗಿದೆ. ಪಕ್ಷ ಕಟ್ಟುವ ವಿಚಾರವಾಗಿ ಹಲವಾರು ಬಾರಿ ದೇವಗೌಡರ ಜತೆ ಸಂಘರ್ಷ ನಡೆಸಿದ್ದೇನೆ. ಪ್ರಮುಖ ವಿಷಯಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಪಕ್ಷದ ಭೂಮಿಕೆಯಲ್ಲಿ ಯಾವುದೇ ಚರ್ಚೆ ಮಾಡಲಿಲ್ಲ ಮತ್ತು ಅದಕ್ಕೆ ಅವಕಾಶವನ್ನೂ ನೀಡಲಿಲ್ಲ” ಎಂದು ಅವರು ಆರೋಪಿಸಿದ್ದಾರೆ. 

ಮಾಸ್ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app