ಮೈಸೂರು ಮೃಗಾಲಯದ ಪುನಶ್ಚೇತನ: ಶಿವಮೊಗ್ಗ ಮೃಗಾಲಯಕ್ಕೆ ಕಾಡೆಮ್ಮೆಗಳ ಸ್ಥಳಾಂತರ

  • ಪ್ರವಾಸಿಗರ ಆಕರ್ಷಣೆಗಾಗಿ ಮೈಸೂರಿನ ಮೃಗಾಲಯ ಪುನಶ್ಚೇತನ
  • ಎರಡು ಜೋಡಿ ಕಾಡೆಮ್ಮೆ ಜೆಕ್ ಗಣರಾಜ್ಯಕ್ಕೆ ಹಸ್ತಾಂತರ

ಮೈಸೂರಿನ ಮೃಗಾಲಯವು ಸುಮಾರು 130 ವರ್ಷಗಳಷ್ಟು ಹಳೆಯದಾಗಿದ್ದು, ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಮೃಗಾಲಯವನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಮೃಗಾಲಯಕ್ಕೆ 21 ಭಾರತೀಯ ಕಾಡೆಮ್ಮೆಗಳನ್ನು ಸ್ಥಳಾಂತರ ಮಾಡಲಿರುವುದಾಗಿ ವರದಿಯಾಗಿದೆ.

ಈಗಾಗಲೇ ಮೂರು ಜೊತೆ ಕಾಡೆಮ್ಮೆಗಳನ್ನು ಶಿವಮೊಗ್ಗ ಮೃಗಾಲಯಕ್ಕೆ  ಕಳುಹಿಸಲಾಗಿದ್ದು, ಉಳಿದವುಗಳನ್ನು ಶೀಘ್ರದಲ್ಲೇ ಸ್ಥಳಾಂತರ ಮಾಡಲಾಗುವುದು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿ ಕಾಡೆಮ್ಮೆ ಸಫಾರಿಯನ್ನು ಸ್ಥಾಪಿಸುತ್ತಿರುವುದರಿಂದ ಕಾಡೆಮ್ಮೆಗಳನ್ನು ಉಳಿಸುತ್ತಿದ್ದೇವೆ. ಸಫಾರಿ ನಡೆಸುವ ಅರಣ್ಯದಲ್ಲಿ ಈ ಕಾಡೆಮ್ಮೆಗಳನ್ನು ಬಿಡಲಾಗುವುದು ಎಂದು ಮೈಸೂರು ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಶ್ರೀರಂಗಪಟ್ಟಣದ ದರಿಯಾ ದೌಲತ್ ವೀಕ್ಷಣೆಗೆ ಉಚಿತ ಪ್ರವೇಶ

ಮೈಸೂರು ಮೃಗಾಲಯವು ಕಳೆದ ಕೆಲವು ದಶಕಗಳಿಂದ ಪ್ರವಾಸಿಗರಿಗಾಗಿ ಕಾಡೆಮ್ಮೆಗಳನ್ನು ಪ್ರದರ್ಶಿಸುತ್ತಿದೆ. ಇದಕ್ಕಾಗಿಯೇ ಒಂದು ವಿಶೇಷ ಆವರಣವನ್ನು ಕೂಡ ಸ್ಥಾಪಿಸಲಾಗಿದೆ. ಪ್ರಸ್ತುತ ಇಲ್ಲಿ 40 ಕಾಡೆಮ್ಮೆಗಳನ್ನು ಹೊಂದಿದ್ದು, ಅವುಗಳಲ್ಲಿ ಸುಮಾರು 21 ಕಾಡೆಮ್ಮೆಗಳನ್ನು ಶಿವಮೊಗ್ಗಕ್ಕೆ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ಎರಡು ಜೋಡಿ ಕಾಡೆಮ್ಮೆಗಳನ್ನು ಜೆಕ್ ಗಣರಾಜ್ಯ ಮೃಗಾಲಯ ಮತ್ತು ಛತ್ತೀಸ್ ಘಡದ ರಾಯ್‌ಪುರ ಮೃಗಾಲಯಕ್ಕೆ ನೀಡಲಾಗಿತ್ತು. ಪ್ರಸ್ತುತ ಈ ಮೃಗಾಲಯವು ಸಂತಾನೋತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಇತರೆ ಬಹುತೇಕ ಪ್ರಾಣಿಗಳ ಜೊತೆಗೆ ಜಿರಾಫೆ ಮತ್ತು ಹುಲಿಗಳನ್ನು ಕೂಡ ಇಲ್ಲಿ ಪೋಷಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್