ಮೈಸೂರು| ಖಾದಿ ಕಡೆಗಣನೆ; ಪ್ರಧಾನಿಗೆ ಹತ್ತು ಪ್ರಶ್ನೆ ಮುಂದಿಟ್ಟ ಧ್ವಜ ಸತ್ಯಾಗ್ರಹ ಸಮಿತಿ

Dwaja Sathyagraha
 • ‘ರಾಷ್ಟ್ರಧ್ವಜದಿಂದ ಖಾದಿಯನ್ನು ಕಿತ್ತು ಹಾಕಲು ಕಾರಣವೇನು?’
 • ‘ಶುದ್ಧ ಖಾದಿ ಬಾವುಟವನ್ನು ಜನ ಸಾಮಾನ್ಯರ ಕೈಗೆಟುಕದಂತೆ ಮಾಡಿದ್ಯಾಕೆ’

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಹರ್- ಘರ್- ತಿರಂಗಾ’ ಯಾತ್ರೆಗೆ ಕೇಂದ್ರ ಸರ್ಕಾರ ಕರೆ ನೀಡಿದೆ. ‘ಧ್ವಜ ಸಂಹಿತೆ-2002’ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್ ಧ್ವಜಗಳಿಗೆ ಕೇಂದ್ರ ಅನುಮತಿಸಿದೆ. ಇದಕ್ಕೆ ಹಲವೆಡೆ ಖಂಡನೆ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಮೈಸೂರಿನ ಧ್ವಜ ಸತ್ಯಾಗ್ರಹ ಸಮಿತಿಯ ಸಂಚಾಲಕ ಕಾಳಚನ್ನೇಗೌಡ ಖಂಡಿಸಿದ್ದಾರೆ. ಸೋಮವಾರ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಖಾದಿ ಕಡೆಗಣನೆ ಮತ್ತು ಸಿಂಥೆಟಿಕ್‌ ಧ್ವಜದ ಬಲವಂತದ ಮಾರಟದ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮುಂದೆ ಹತ್ತು ಪ್ರಶ್ನೆ ಇಟ್ಟಿದ್ದಾರೆ.

Eedina App

ಕೇಂದ್ರ ಸರ್ಕಾರಕ್ಕೆ ಕೇಳಿರುವ ಹತ್ತು ಪ್ರಶ್ನೆಗಳು:

 • ರಾಷ್ಟ್ರಧ್ವಜದಿಂದ ಖಾದಿಯನ್ನು ಕಿತ್ತು ಹಾಕಲು ಕಾರಣವೇನು?
 • ಸರ್ಕಾರಿ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ವಿದೇಶದಲ್ಲಿ ತಯಾರಾದ ಸಿಂಥೆಟಿಕ್‌ ಧ್ವಜವನ್ನು ಏಕೆ ಬಲವಂತವಾಗಿ ಮಾರುತ್ತಿದ್ದೀರಿ?
 • ನಮ್ಮ ಧ್ವಜದಲ್ಲಿರುವ ಶಾಂತಿಪ್ರಿಯ ಅಶೋಕನ ಲಾಂಛನ ಮತ್ತು ಖಾದಿ ಬಟ್ಟೆ ಅಹಿಂಸೆಯ ಸಂಕೇತಗಳಾಗಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಾವುಟ ಕಾರ್ಯಕ್ರಮವನ್ನು ಯುದ್ಧಭೂಮಿಯೊಂದರಿಂದ ಉದ್ಘಾಟಿಸಿ ಯಾವ ಸಂದೇಶ ನೀಡಲು ಹೊರಟಿದ್ದೀರಿ. ಆ ಮೂಲಕ ಭಾರತ ಹಿಂಸಾವಾದಿ ದೇಶವೆಂಬ ಸಂಕೇತವನ್ನೇಕೆ ಜಗತ್ತಿಗೆ ಸಾರುತ್ತಿದ್ದೀರಿ?
 • ವಿದೇಶದಲ್ಲಿ ತಯಾರಾದ ಬಾವುಟಗಳಲ್ಲಿರುವ ಲೋಪಗಳು ನಿಮ್ಮ ಗಮನಕ್ಕೆ ಬರಲಿಲ್ಲವೇ? ಇಂತಹ ಬಾವುಟಗಳನ್ನು ತಯಾರಿಸಿದವರನ್ನು ಭ್ರಷ್ಟರನ್ನು ಶಿಕ್ಷಿಸುವ ಬದಲು ನೀವೇ ಅವುಗಳನ್ನು ಅಧಿಕೃತವಾಗಿ ಮಾರುತ್ತಿದ್ದಿರಲ್ಲ. ಇದು ಭ್ರಷ್ಟಾಚಾರವಲ್ಲವೇ?
 • ಈಗ ಮಾರಾಟವಾಗುತ್ತಿರುವ ಸಿಂಥೆಟಿಕ್ ರಾಷ್ಟ್ರಧ್ವಜವು ಪಕ್ಕದ ದೇಶ ಚೀನಾದಿಂದ ನಿರ್ಮಾಣಗೊಂಡು ಅಧಿಕೃತವಾಗಿ ಮಾರಾಟಗೊಳ್ಳುತ್ತಿದೆ ಎಂಬ ಸುದ್ಧಿ ನಿಜವೇ?
 • ರಾಷ್ಟ್ರಧ್ವಜವನ್ನು ಕೆಳಗಿಳಿಸುವ ಅಗತ್ಯವಿಲ್ಲ. ಎಂತಹ ಪರಿಸ್ಥಿತಿಯಲ್ಲೂ ರಾಷ್ಟ್ರಧ್ವಜವು ಕಂಬಕ್ಕೆ ಜೋತು ಬಿದ್ದಿರಬೇಕು ಎಂದು ‘ಧ್ವಜನಿಯಮ’ವನ್ನು ತಾವು ತಿದ್ದಿರುವುದು ಸರಿಯೇ?
 • ಸಿಂಥೆಟಿಕ್ ಬಾವುಟಗಳ ಉತ್ಪಾದನೆ, ಆಯತ, ವಿತರಣೆಗೆಂದು ಸರ್ಕಾರವು ಎಷ್ಟು ಮೊತ್ತದ ತೆರಿಗೆ ಹಣವನ್ನು ಖರ್ಚು ಮಾಡಿದೆ? ಇತ್ತ ಕಡೆ ಖಾದಿ ಹಾಗೂ ಗ್ರಾಮೋದ್ಯೋಗದ ಉತ್ಪಾದನೆ, ಆಯತ, ವಿತರಣೆಯನ್ನೇ ಭಾಗಶಃ ಸ್ಥಗಿತಗೊಳಿಸಿರುವ ಸರ್ಕಾರವು ಇದೇ ಹಣವನ್ನು ಗ್ರಾಮೋದ್ಯೋಗದ ಪುನಶ್ಚೇತನಕ್ಕಾಗಿ ಖರ್ಚು ಮಾಡಬಹುದಿತ್ತಲ್ಲವೇ? ಬಡವರ ಪರವಾದ ಕಾರ್ಯಕ್ರಮವಲ್ಲವೇ ‘ಸ್ವದೇಶಿ’?
 • ಶುದ್ಧ ಖಾದಿ ಬಾವುಟವನ್ನು ಜನ ಸಾಮಾನ್ಯರ ಕೈಗೆಟುಕದಂತೆ ಅತಿ ದುಬಾರಿ ಬೆಲೆಗೆ ಮಾರುತ್ತಿರುವುದು  ಸರಿಯೆ?
 • ಕಲೆ ಹಾಗೂ ಸಾಹಿತ್ಯಗಳಿಗೆ ಸಂಬಂಧಿಸಿದ ಅಕಾಡೆಮಿಗಳು ಸರ್ಕಾರದ ಕಾರ್ಯಕ್ರಮವನ್ನು ಬೆಂಬಲಿಸುವಂತೆ ಸಾಹಿತಿಗಳು ಮತ್ತು ಕಲಾವಿದರುಗಳ ಮೇಲೆ ಬಲವಂತ ಹೇರುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲವೇ?
 • ಹರ್-ಘರ್-ತಿರಂಗ ಎಂಬುದು ‘ವಿದೇಶಿಯರೇ ದೇಶಬಿಟ್ಟು ತೊಲಗಿ’ ಎಂಬ ಸ್ವದೇಶಿ ಚಳುವಳಿಯ ಕೂಗಾಗಿತ್ತು. ಸ್ವದೇಶಿ ಉತ್ಪಾದನೆಗಳನ್ನು ಮೂಲೆಗುಂಪು ಮಾಡಿರುವ ತಮ್ಮ ಸರ್ಕಾರವು ‘ಹರ್-ಘರ್-ತಿರಂಗ’ ಎಂದು ಕೂಗುವುದು ವಿಪರ್ಯಾಸವಲ್ಲವೆ?

ಹೀಗೆ ಸಂಚಾಲಕ ಕಾಳಚನ್ನೇಗೌಡ ತಮ್ಮ ಹತ್ತು ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

AV Eye Hospital ad
ನಿಮಗೆ ಏನು ಅನ್ನಿಸ್ತು?
6 ವೋಟ್
eedina app