ಮೈಸೂರು | ಸೆ.26ರಿಂದ ಅರಮನೆ ಆವರಣದಲ್ಲಿ 'ಸಂಗೀತೋತ್ಸವ'

Aramane
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಿಂದ ಉದ್ಘಾಟನೆ 
  • ಕಾರ್ಯಕ್ರಮದಲ್ಲಿ ರಾಜ್ಯ 'ಸಂಗೀತ ವಿದ್ವಾನ್' ಪ್ರಶಸ್ತಿ ಪ್ರದಾನ 

ದಸರಾ ಮಹೋತ್ಸವದ ಸಾಂಸ್ಕೃತಿಕ ಉಪ ಸಮಿತಿಯಿಂದ ಮೈಸೂರು ಅರಮನೆಯಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 3ರವರೆಗೆ ದಸರಾ ಸಂಗೀತೋತ್ಸವವನ್ನು ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ, 'ಸಂಗೀತ ವಿದ್ವಾನ್' ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸೆಪ್ಟೆಂಬರ್ 26 ಸಂಜೆ 5.30ಕ್ಕೆ ಯದುನಾಥ್ ಮತ್ತು ಗುರುರಾಜ ತಂಡದಿಂದ ನಾದಸ್ವರ ಕಾರ್ಯಕ್ರಮ. ರಾತ್ರಿ ಎಚ್ ಆರ್ ಲೀಲಾವತಿ ಅವರಿಂದ ಸುಗಮ ಸಂಗೀತ. ಸೆ. 27ಕ್ಕೆ ನಾಗರಾಜು ಮತ್ತು ಲಕ್ಷ್ಮಿ ನಾಗರಾಜು ತಂಡದಿಂದ ಭಕ್ತಿ ಸಂಗೀತ. ಹಾಗೂ ವಿದ್ವಾನ್ ಸಂದೀಪ್ ನಾರಾಯಣ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

Eedina App

ಸೆ.28ರಂದು ಕರ್ನಾಟಕ ಕಲಾಶ್ರೀ ವಿದ್ವಾನ್ ಸಿ.ರಾಮದಾಸ್ ಅವರಿಂದ ಹಾರ್ಮೋನಿಯಂ. ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ದಾಸರ ಪದ, ಸೆ.29ಕ್ಕೆ ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ವಚನ ಗಾಯನ ಮತ್ತು ಬೆಂಗಳೂರಿನ ಚಕ್ರ ಫೋನಿಕ್ಸ್ ತಂಡದಿಂದ ವಿಶ್ವ ಸಂಗೀತ (ಕರ್ನಾಟಕ ವಾದ್ಯ ಸಂಗೀತಗಳ ಸಮ್ಮಿಲನ) ಕಾರ್ಯಕ್ರಮ ನಡೆಯಲಿದೆ.

ಈ ಸುದ್ದಿ ಓದಿದ್ದೀರಾ?: ವಿಶೇ‍ಷ ಅಧಿವೇಶನ ರದ್ದು | ಆಪರೇಷನ್‌ ಕಮಲ ಆರೋಪಕ್ಕೆ ಸಾಕ್ಷಿ ನೀಡಿ ಎಂದು ಬಿಜೆಪಿ ಪ್ರತಿಭಟನೆ

AV Eye Hospital ad

ಸೆ.30ಕ್ಕೆ ಜ್ಞಾನಮೂರ್ತಿ ಮತ್ತು ತಂಡದಿಂದ ಭಕ್ತಿ ಸಂಗೀತ, ಕೋಲ್ಕತ್ತಾದ ವಿದುಷಿ ಕೌಶಿಕಿ ಚಕ್ರವರ್ತಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ. ಅಕ್ಟೋಬರ್ 01ರಂದು ಪನ್ನಗ ವಿಜಯಕುಮಾರ್, ವೇದವ್ಯಾಸ ಸೇವಾ ಟ್ರಸ್ಟ್ ಅವರಿಂದ ಜಾನಪದ ಗಾಯನ, ಸಂಜೆ 6ರಿಂದ 7ರವರೆಗೆ ಟಿ ಎಸ್ ನಾಗಾಭರಣ, ಬೆನಕ ತಂಡದಿಂದ ರಂಗಗೀತೆಗಳಿವೆ.

ಅ.2ಕ್ಕೆ ಕಂಬದ ರಂಗಯ್ಯ ನೇತೃತ್ವದಲ್ಲಿ ವಿವಿಧ ಕಲಾವಿದರಿಂದ ಜನಪದ ಸಂಗೀತ. ಮನೋಜ್ ವಶಿಷ್ಠ ಮತ್ತು ಅರುಂಧತಿ ವಶಿಷ್ಠ ತಂಡದಿಂದ ಸಂಗೀತ ವೈವಿಧ್ಯವಿದೆ. ಅ. 3ರಂದು ಗಡುಬಗೆರೆ ಮುನಿರಾಜು ಅವರಿಂದ ಜನಪದ ಸಂಗೀತ, ರಾತ್ರಿ ಮುಂಬೈನ ಪದ್ಮಶ್ರೀ ಅನುಪ್ ಜಲೋಟರಿಂದ ಗಜಲ್ ಕಾರ್ಯಕ್ರಮವಿರುವುದಾಗಿ ಸಂಘಟಕರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app