ನಂದಿನಿ ಹಾಲಿನ ದರ ಹೆಚ್ಚಳ | ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆಯ ಬರೆ

Nandini milk
  • ದರ ಹೆಚ್ಚಳಕ್ಕೆ ಹಲವು ಬಾರಿ ಒತ್ತಾಯಿಸಿದ್ದ ಹಾಲು ಉತ್ಪಾದಕರು
  • ಕಳೆದ ಸೆ.12ರಂದು ಹಾಲಿನ ದರ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಕೆಎಂಎಫ್

ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದಂತಾಗುತ್ತಿದೆ.

ನ.15ರಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಪ್ರತಿ ಲೀಟರ್‌ ಹಾಲಿಗೆ ₹3 ಮತ್ತು ಒಂದು ಲೀಟರ್‌ ಮೊಸರಿಗೆ ₹3 ದರ ಹೆಚ್ಚಿಸಲಾಗಿದೆ.

Eedina App

ಟೋನ್ಡ್‌ ಹಾಲಿನ ದರ ₹37 ರಿಂದ ₹40 ಗೆ ಹೆಚ್ಚಳ, ಸಮೃದ್ಧಿ ಹಾಲಿನ ದರ ಲೀ. ₹48 ರಿಂದ ₹51 ಗೆ ಏರಿದ್ದು, ಸ್ಪೇಷಲ್‌ ಹಾಲಿನ ದರ ಲೀ. ₹43 ರಿಂದ ₹46ಗೆ ಹೆಚ್ಚಳವಾಗಿದೆ. ಇನ್ನು ಮೊಸರಿನ ದರ ಲೀಟರ್‌ಗೆ ₹45 ರಿಂದ ₹ 48 ಗೆ ಏರಿಕೆ ಮಾಡಲಾಗಿದೆ.

ಈಗ ಏರಿಕೆ ಮಾಡಲಾಗಿರುವ ಹೆಚ್ಚುವರಿ ಹಾಲು ಮತ್ತು ಮೊಸರಿನ ದರವನ್ನು ರೈತರಿಗೆ ಪ್ರೋತ್ಸಾಹ ಧನವಾಗಿ ನೀಡಲು ನಿರ್ಧರಿಸಲಾಗಿದೆ. ಆದರೆ ಹಾಲು, ಮೊಸರು ಬೆಲೆ ಏರಿಕೆಯಿಂದ ಗ್ರಾಹಕರಿಗೆ ಬರೆ ಬಿದ್ದಂತಾಗಿದೆ.‌

AV Eye Hospital ad

ರಾಜ್ಯದಲ್ಲಿ ಬೆಲೆ ಏರಿಕೆಯಿಂದ ರೈತರು ಕೂಡ ತತ್ತರಿಸಿದ್ದರು. ಹಾಗಾಗಿ ಹಸುಗಳಿಗೆ ಹಿಂಡಿ, ಬೂಸಾ, ಮೇವು, ಚಿಕಿತ್ಸಾ ವೆಚ್ಚ ಹೀಗೆ ಹೈನುಗಾರಿಕೆ ಖರ್ಚುಗಳು ಕೂಡ ವಿಪರೀತ ಹೆಚ್ಚಿದ್ದರಿಂದ ಹಾಲಿನ ದರ ಹೆಚ್ಚಳ ಮಾಡಿ ಎಂದು ಹಲವು ಬಾರಿ ಒತ್ತಾಯಿಸಿದ್ದರು. ಜೊತೆಗೆ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೆ, ಹಾಲಿನ ದರ ಹೆಚ್ಚಳ ಮಾಡುವಂತೆ ಬಮೂಲ್ ಸೇರಿದಂತೆ ಹಲವು ವಿಭಾಗಗಳು ಒತ್ತಡ ತಂದಿದ್ದವು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಕಬ್ಬು, ಹಾಲು, ಭತ್ತದ ಬೆಲೆ ಏರಿಕೆಗೆ ಆಗ್ರಹಿಸಿ ರೈತಸಂಘ ಅಹೋರಾತ್ರಿ ಧರಣಿ

ಕಳೆದ ಸೆ.12ರಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ವಾರ್ಷಿಕ ಸಭೆ ನಡೆಸಿ ಹಾಲಿನ ದರ ಹೆಚ್ಚಿಸಲು ತೀರ್ಮಾನಿಸಿ, ಪ್ರತಿ ಲೀ. ಹಾಲಿಗೆ ₹3 ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app