ಮತಾಂತರಗೊಂಡ ಪರಿಶಿಷ್ಟರಿಗೆ ಮೀಸಲಾತಿ ಬೇಡ: ವಿಶ್ವ ಹಿಂದೂ ಪರಿಷತ್ ಪ್ರತಿಪಾದನೆ

  • ಹಿಂದೂ ಧರ್ಮದ ಅರ್ಹ ಎಸ್‌ಸಿ, ಎಸ್‌ಸ್ಟಿಗಳು ಮೀಸಲಾತಿಯಿಂದ ವಂಚಿತರಾಗುತ್ತಾರೆ
  • ಮತಾಂತರ ಆದವರಿಗೆ ಎಸ್‌ಸಿ, ಎಸ್‌ಸ್ಟಿ ಸ್ಥಾನಮಾನ ಕುರಿತು ಪರಿಶೀಲನೆಗೆ ಸಮಿತಿ ರಚನೆ

ಸಂವಿಧಾನದ ಆಶಯದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹಕ್ಕುಗಳು ಹಿಂದೂಗಳಿಗೆ ಸಿಗಬೇಕೆ ಹೊರತು ಅನ್ಯ ಧರ್ಮಗಳಿಗೆ ಮತಾಂತರ ಆದವರಿಗೆ ವಿಸ್ತರಿಸಬಾರದು ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೈಯಕ್ತಿಕ ಕಾರಣಕ್ಕಾಗಿ ಹಿಂದೂ ದಲಿತ ಸಮುದಾಯದಿಂದ ಇತರೆ ಧರ್ಮಕ್ಕೆ ಮತಾಂತರ ಆದವರಿಗೆ ಮೀಸಲಾತಿ ಇರಬಾರದು. ಮತಾಂತರ ಆದವರು ಮೀಸಲಾತಿ ಪಡೆದರೆ, ಹಿಂದೂ ಧರ್ಮದ ಅರ್ಹ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಂಚಿತರಾಗುತ್ತಾರೆ. ಈ ಬಗ್ಗೆ ವಿವರ ಸಮಾಲೋಚನೆ ಆಗಬೇಕು ಎಂದರು.

Eedina App

ಮೀಸಲಾತಿ ಕುರಿತು ಅಧ್ಯಯನ ನಡೆಸಲು ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಸಮೀಕ್ಷೆಗೆ ವಿಶ್ವ ಹಿಂದೂ ಪರಿಷತ್ ಸಹಕಾರ ನೀಡುತ್ತದೆ. ಈ ಮೂಲಕ ಮೀಸಲಾತಿ ದುರುಪಯೋಗ ತಡೆಯಲು, ನೆರವಾಗುತ್ತದೆ ಎಂದು ಹೇಳಿದರು.

ದಲಿತ ಸಂಘಟನೆಗಳಿಂದಲೂ ಅಭಿಯಾನ

AV Eye Hospital ad

ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ದಲಿತರಿಗೆ ಪರಿಶಿಷ್ಟ ಜಾತಿ(ಎಸ್‌ಸಿ) ಸ್ಥಾನಮಾನ ನೀಡುವುದನ್ನು ವಿರೋಧಿಸಿ ಇತ್ತೀಚೆಗೆ ದಲಿತ ಸಂಘಟನೆಗಳು ಕೂಡ ಅಭಿಯಾನ ಪ್ರಾರಂಭ ಮಾಡಿದ್ದವು.

ಮತಾಂತರಗೊಂಡಿರುವ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೊ ಬೇಡವೊ ಎಂಬುದರ ಕುರಿತು ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರವು, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿದೆ. ಸಮಿತಿಯು ನಿವೃತ್ತ ಐಎಎಸ್ ಅಧಿಕಾರಿ ರವೀಂದ್ರ ಕುಮಾರ್ ಜೈನ್, ಯುಜಿಸಿ ಸದಸ್ಯೆ ಸುಷ್ಮಾ ಯಾದವ್ ಅವರನ್ನು ಒಳಗೊಂಡಿದೆ. 

ಈ ಸುದ್ದಿ ಓದಿದ್ದೀರಾ? ಎಸ್‌ಸಿ,ಎಸ್‌ಟಿ ಮೀಸಲಾತಿ ಹೆಚ್ಚಳ | ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ಸರ್ಕಾರ..? 

ಸಮಿತಿಯು, ಮತಾಂತರಗೊಂಡವರಿಗೆ ಪರಿಶಿಷ್ಟ ಸಮುದಾಯದ ಮಾನ್ಯತೆ ನೀಡಬಹುದೇ? ಒಂದು ವೇಳೆ ಅಂಥ ಮಾನ್ಯತೆ ನೀಡಿದರೆ ಸಾಮಾಜಿಕವಾಗಿ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆಯೆ ಎಂಬ ಬಗ್ಗೆ ಪರಿಶೀಲನೆ ನಡೆಸಲಿದೆ.

ಮತಾಂತರಗೊಂಡ ದಲಿತರಿಗೆ ಎಸ್‌ಸಿ ಮಾನ್ಯತೆ ನೀಡುವ ಕುರಿತು ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿರುವುದನ್ನು ವಿರೋಧಿಸಿ ನ್ಯಾಷನಲ್ ಕಾನ್ಫಿಡರೇಷನ್ ಆಫ್ ದಲಿತ್ ಆ್ಯಂಡ್ ಅದಿವಾಸಿ ಆರ್ಗನೈಸೇಷನ್ (ಎನ್ಎಸಿಡಿ ಎಒಆರ್) ಅಭಿಯಾನ ಕೈಗೊಂಡಿತ್ತು.

ಆರ್‌ಎಸ್‌ಎಸ್‌ ಕಾರ್ಯಕಾರಿಣಿಯಲ್ಲಿ ಚರ್ಚೆ

ಉತ್ತರಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಮೀಸಲಾಯಿತಿ ನೀಡಬಾರದು. ಇದರಿಂದ ಹಿಂದೂ ಧರ್ಮದ ಎಸ್ಸಿ, ಎಸ್ಟಿ ಸಮುದಾಯದವರು ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂಬುದರ ಕುರಿತು ಚರ್ಚಿಸಲಾಗಿತ್ತು. ಈ ಬೆನ್ನಲ್ಲೆ ವಿಶ್ವಹಿಂದೂ ಪರಿಷತ್ ಈ ಹೇಳಿಕೆ ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app