ಒಂದು ನಿಮಿಷದ ಓದು | ಮಳೆಯಿಂದ ರಸ್ತೆ ಹಾನಿ; ರೈತ ಸಾವು

ಹೊಲದತ್ತ ವಾಹನ ಚಾಲನೆ ಅಸಾಧ್ಯವಾದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾದ ರೈತ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕು ಡಂಬಳ ಹೋಬಳಿ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ.

ನಿರಂತರವಾಗಿ ಸುರಿದಿರುವ ಮಳೆಯಿಂದ ರಸ್ತೆಗಳೆಲ್ಲ ಹಾಳಾಗಿದ್ದು, ಹೊಲದತ್ತ ಹೋಗುವ ರಸ್ತೆ ಕೆಸರು ತುಂಬಿ ನಿಂತಿದೆ. ಇದರಿಂದ ಕೃಷಿ ಕೆಲಸಕ್ಕೆ ಹೊಲದೊಳಗೆ ವಾಹನ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಇದರಿಂದ ಗಾಬರಿಗೊಳಗಾದ ರೈತ ಕರಿಯಪ್ಪ ಗೌಡ ಕುಸಿದು ಬಿದ್ದಿದ್ದಾರೆ. ಅಕ್ಕಪಕ್ಕದ ಹೊಲದಲ್ಲಿದ್ದ ಜನರು ಕರಿಯಪ್ಪ ಗೌಡರ ಸಹಾಯಕ್ಕೆ ಧಾವಿಸಿದ್ದು, ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು.

ರಸ್ತೆ ಮಳೆಯಿಂದ ಹಾಳಾಗಿದ್ದುದರಿಂದ ಸ್ಥಳದಲ್ಲಿ ಯಾವುದೇ ವಾಹನವೂ ಲಭ್ಯವಾಗಿಲ್ಲ. ಅಷ್ಟರಲ್ಲಿ ರೈತ ಕರಿಯಪ್ಪ ಅಸುನೀಗಿದ್ದರು. ಅನಿರ್ವಾಯವಾಗಿ ಜನರೇ ರೈತನ ಶವ ಹೊತ್ತು ಸಾಗಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app