ಮಂಡ್ಯ | ‘ಮೈಶುಗರ್’ ಸಕ್ಕರೆ‌ ಕಾರ್ಖಾನೆ ಪುನಾರಾರಂಭ; ಸಂತಸದಲ್ಲಿ ಕಬ್ಬು ಬೆಳೆಗಾರರು

Mandya
  • ನಾಲ್ಕು ವರ್ಷಗಳ ಬಳಿಕ ಕಾರ್ಖಾನೆ ಪುನಾರಾರಂಭ
  • ರೈತರ ಹೋರಾಟಕ್ಕೆ ಮಣಿದು ಸರ್ಕಾರ

ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾದ ‘ಮೈಶುಗರ್’‌ ಕಾರ್ಖಾನೆ ಸತತ ನಾಲ್ಕು ವರ್ಷಗಳ ನಂತರ ಗುರುವಾರ ಮತ್ತೆ ಪ್ರಾರಂಭವಾಗಿದೆ. ಕಾರ್ಖಾನೆ ಆರಂಭಗೊಂಡಿರುವುದರಿಂದ ಕಬ್ಬು ಬೆಳೆಗಾರರು ಸಂತೋಷ ವ್ಯಕ್ತಪಡಿಸಿದ್ದಾರೆ. 

ಮೈಶುಗರ್ ಕಾರ್ಖಾನೆ ಪುನರಾರಂಭ ಮಾಡುವಂತೆ ನಾಲ್ಕು ವರ್ಷಗಳಿಂದಲೂ ರೈತರು ಪ್ರತಿಭಟನೆ ನಡೆಸಿದ್ದರು. ಆದರೆ, ದುರಸ್ತಿಯ ನೆಪಹೇಳುತ್ತಿದ್ದ ಸರ್ಕಾರ, ಇತ್ತೀಚೆಗೆ ಕಾರ್ಖಾನೆ ಪುನರಾರಂಭದ ಭರವಸೆ ನೀಡಿತ್ತು. ಅದರಂತೆ ಗುರುವಾರ ಕಾರ್ಖಾನೆಗೆ ಚಾಲನೆ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಬಾಯ್ಲರ್‍‌ಗಳಿಗೆ ಅಗ್ನಿ ಸ್ಪರ್ಶ ನೀಡುವ ಮೂಲಕ ಕಾರ್ಖಾನೆಗೆ ಜೀವಂತಿಕೆ ನೀಡಿದ್ದಾರೆ.

2017-18 ಹಣಕಾಸು ವರ್ಷದಲ್ಲಿ ಕೊನೆಯ ಬಾರಿಗೆ ಕಾರ್ಖಾನೆಯಲ್ಲಿ ಸಕ್ಕರೆ ಉತ್ಪಾದನೆ (ಶುಗರ್‍‌ ಕ್ರಷಿಂಗ್) ಮಾಡಲಾಗಿತ್ತು. ಈ ವರ್ಷ 4 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಮಾಡುವ ನಿರೀಕ್ಷೆಯಿದೆ.

ಈ ಸುದ್ದಿ ಓದಿದ್ದೀರಾ? : ಚಾಮರಾಜನಗರ | ಅರಣ್ಯಾಧಿಕಾರಿ ವರ್ಗಾವಣೆ ವಿರೋಧಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

“ಜನರ ಬೇಡಿಕೆಗೆ ಸ್ಪಂದಿಸಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಾರ್ಖಾನೆಯನ್ನು ಪುನಾರಾರಂಭ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಖಾನೆಗೆ ಮುಖ್ಯಮಂತ್ರಿಗಳು ಭೇಟಿ ನೀಡಿ ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ. ಕಾರ್ಖಾನೆಗೆ ಅಗತ್ಯವಿರುವ ಕಬ್ಬನ್ನು ಈಗಾಗಲೇ ಖರೀದಿಸಲಾಗಿದೆ” ಎಂದು ಕೆ ಗೋಪಾಲಯ್ಯ ಹೇಳಿದ್ದಾರೆ. 

Image
Mandya
ಬಾಯ್ಲರ್‍‌ಗೆ ಅಗ್ನಿ ಸ್ಪರ್ಶ ನೀಡುತ್ತಿರುವ ಕೆ.ಗೋಪಾಲಯ್ಯ

“ಕಾರ್ಖಾನೆಗೆ ಕಾಯಕಲ್ಪ ನೀಡಲು ಹಿಂದಿನ ಸರ್ಕಾರಗಳು ಆಸಕ್ತಿ ವಹಿಸಿರಲಿಲ್ಲ. ಕಾರ್ಖಾನೆಯ  ಯಂತ್ರಗಳು ತುಕ್ಕು ಹಿಡಿಯುತ್ತಿದ್ದವು. ಈ ಕಾರ್ಖಾನೆಯೊಂದಿಗೆ ಬಾಂಧವ್ಯ ಹೊಂದಿರುವ ರೈತರ ಭಾವನೆಗಳಿಗೆ ಸರ್ಕಾರ ಸ್ಪಂದಿಸಿದೆ. ಕಬ್ಬು ಬೆಳೆಗಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ“ ಎಂದು ಸಚಿವ ಕೆ ಸಿ ನಾರಾಯಣಗೌಡ ತಿಳಿಸಿದ್ದಾರೆ.

ಆಗಸ್ಟ್‌ 17 ಅಥವಾ ಆಗಸ್ಟ್ 18 ಕ್ಕೆ ಮುಖ್ಯಮಂತ್ರಿಗಳಿಂದ ಅಧಿಕೃತವಾಗಿ ಕಾರ್ಖಾನೆಗೆ ಚಾಲನೆ ಸಿಗುವ ಸಾಧ್ಯತೆಯಿಂದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಷ್, ಶಾಸಕ ಎಂ.ಶ್ರೀನಿವಾಸ್, ಜಿಲ್ಲಾಧಿಕಾರಿ ಎಸ್ ಅಶ್ವತಿ, ಮೈ ಶುಗರ್ ಪ್ರಧಾನ ವ್ಯವಸ್ಥಾಪಕ ಶಿವಾನಂದಮೂರ್ತಿ ಮತ್ತು ಮೈ ಶುಗರ್ ವ್ಯವಸ್ಥಾಪಕ ನಿರ್ದೇಶಕ ಪಾಟೀಲ ಅಪ್ಪ ಸಹೇಬ ಮತ್ತಿತ್ತರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್