ಇದು ನಮ್ಮ ಸೌಹಾರ್ದ: ಕರಡಿಗೋಡು ಬಸವಣ್ಣನ ಜಾತ್ರೆಗೆ ಸಾಕ್ಷಿಯಾಗುವ ಸರ್ವಧರ್ಮೀಯರು

  • ಸೌಹಾರ್ದ ಸಾರುವ ಕೊಡಗಿನ ಕರಡಿಗೋಡು ಬಸವೇಶ್ವರ ಜಾತ್ರೋತ್ಸವ
  • ಅನ್ಯಧರ್ಮೀಯರಿಂದ ಬಸವಣ್ಣನಿಗೆ ಪೂಜೆ- ಉತ್ಸವದಲ್ಲಿ ಭಾಗಿ

ನಮ್ಮ ನೆಲದ ಸಂಸ್ಕೃತಿಯನ್ನು ಸಾರುವ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡಿನ ಬಸವೇಶ್ವರ ಜಾತ್ರೆ ಸರ್ವಧರ್ಮೀಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

ಎರಡು ಶತಮಾನಗಳ ಹಿನ್ನೆಲೆಯುಳ್ಳ ಈ ಜಾತ್ರೆಯನ್ನು ಹಿಂದು-ಮುಸ್ಲಿಂ-ಕ್ರೈಸ್ತರು ಸೇರಿ ನಡೆಸುವುದು ವಾಡಿಕೆ. ಧರ್ಮ ಬೇಧವಿಲ್ಲದೇ ಎಲ್ಲ ಸಮುದಾಯದವರೂ ಪಾಲ್ಗೊಳ್ಳುತ್ತಾರೆ.

ಸಿದ್ದಾಪುರ, ಹುದಿಕೇರಿ, ನೆಲ್ಯ, ಬರಡಿ, ಪಾಲಿಬೆಟ್ಟ ಹೀಗೆ ಸುತ್ತಮುತ್ತಲ ಗ್ರಾಮಗಳ ಸರ್ವಧರ್ಮೀಯರು ಬಸವೇಶ್ವರ ದೇವಳಕ್ಕೆ ಬಂದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ, ಬಸವಣ್ಣನಿಗೆ ಪೂಜೆ ಸಲ್ಲಿಸುತ್ತಾರೆ.

ಜಾತ್ರೆಯ ಮೊದಲ ದಿನ ಮೆರವಣಿಗೆ ಮೂಲಕ ಕಾವೇರಿ ನದಿಗೆ ತೆರಳಿ ಕಾವೇರಮ್ಮನ ಮಜ್ಜನ, ಅಭಿಷೇಕ, ಪೂಜೆ ನಡೆಸಲಾಗುತ್ತದೆ. ನಂತರ ಬಸವಣ್ಣನ ಮೂಲ ಸ್ಥಾನ ಕರಡಿಗೋಡು ಗ್ರಾಮಕ್ಕೆ ಬಂದು ಜಾತ್ರಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ. ನಾಲ್ಕು ದಿನ ನಡೆಯುವ ಜಾತ್ರೋತ್ಸವದ ದಾಸೋಹದಲ್ಲಿ ಎಲ್ಲ ಧರ್ಮದವರು ಅಕ್ಕಿ-ಬೇಳೆ, ಬೆಲ್ಲ, ತರಕಾರಿ ನೀಡುತ್ತಾರೆ.

AV Eye Hospital ad

ಇದನ್ನು ಓದಿದ್ದೀರಾ? ಇದು ನಮ್ಮ ಸೌಹಾರ್ದ: ಬೇಲೂರು ರಥೋತ್ಸವದಲ್ಲಿ ಸಾಂಪ್ರದಾಯಿಕ ಕುರಾನ್‌ ಪಠಣ

ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಬಸವಣ್ಣನ ಅಡ್ಡಪಲ್ಲಕ್ಕಿಯ ಮೆರವಣಿಗೆ ಹಿಂದು-ಮುಸ್ಲಿಂ, ಕ್ರೈಸ್ತರ ಬೀದಿಗಳಲ್ಲಿ ನಡೆಯುತ್ತದೆ. ಈ ವೇಳೆ ಅನ್ಯ ಧರ್ಮೀಯರೂ ಹಣ್ಣು-ಕಾಯಿ, ಹೂವು ಸಮರ್ಪಿಸಿ ಪೂಜೆ ಸಲ್ಲಿಸುವರು.

ರಾಜ್ಯದ ಹಲವೆಡೆ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರುವ ಮತ್ತು ಹಲಾಲ್‌ ವಿಚಾರದಲ್ಲಿ ಅಶಾಂತಿ ಸೃಷ್ಟಿಸಿದ ಘಟನೆಗಳು ಸಂಭವಿಸಿದ ಇಂಥ ಸಂದರ್ಭದಲ್ಲಿ ಕರಡಿಗೋಡು ಬಸವಣ್ಣನ ಜಾತ್ರೆ ನೆಲದ ಗುಣವನ್ನು ಸಾರುತ್ತಿದೆ.

ಮಾಸ್‌ ಮೀಡಿಯಾ ಕೊಡಗು ಜಿಲ್ಲಾ ಮಾಧ್ಯಮ ಸಂಯೋಜಕ ಮೋಹನ್‌ ಜಿ ಅವರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app