ʼಪೇ ಸಿಎಂʼ ಪೋಸ್ಟರ್‌ ಆಯ್ತು ಈಗ ವಿಡಿಯೋ ಸರದಿ

Pay CM
  • ‘ಪೇ ಸಿಎಂ’ ಪೋಸ್ಟರ್ ಅಭಿಯಾನ ಭಾಗವಾಗಿ ʼಪೇ ಸಿಎಂʼ ವಿಡಿಯೋಗಳು ವೈರಲ್‌
  • ವಿಡಿಯೋದಲ್ಲಿ 40 ಪರ್ಸೆಂಟ್‌ ಅಭಿಯಾನದ ಮಿಸ್ಡ್‌ ಕಾಲ್‌ ನಂಬರ್‌ ನಮೂದು

ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಕಾಂಗ್ರೆಸ್ಸಿನ ‘ಪೇ ಸಿಎಂ’ ಪೋಸ್ಟರ್ ಅಭಿಯಾನ ಈಗ ಮತ್ತೊಂದು ಹಂತ ತಲುಪಿದೆ. ಅದರ ಮುಂದುವರಿದ ಭಾಗವಾಗಿ ʼಪೇ ಸಿಎಂʼ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿವೆ.

ʼಪೇ ಟಿಎಂʼ ಆ್ಯಪ್‌ನ ಮೂಲ ಜಾಹೀರಾತನ್ನು ತಿರುಚಿ ವಿಡಿಯೋ ಸಿದ್ದಪಡಿಸಲಾಗಿದೆ. ಮೂಲ ಜಾಹೀರಾತಿನಲ್ಲಿರುವ ವ್ಯಕ್ತಿಯ ಮುಖಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ ಅಂಟಿಸಿ ʼಪೇ ಸಿಎಂʼ ವಿಡಿಯೋ ತಯಾರಿಸಲಾಗಿದೆ. 

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ 40 ಪರ್ಸೆಂಟ್‌ ಅಭಿಯಾನದ ಮಿಸ್ಡ್‌ ಕಾಲ್‌ ನಂಬರ್‌ ನಮೂದಿಸಲಾಗಿದೆ. ʼಪೇ ಸಿಎಂʼ ಅಭಿಯಾನದ ಭಾಗವಾಗಿ ತರಹೇವಾರಿ ವಿಡಿಯೋಗಳನ್ನು ನೆಟ್ಟಿಗರು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಟ್ರೋಲರ್‌ಗಳು ಬಗೆ ಬಗೆಯಲ್ಲಿ ಈ ವಿಡಿಯೋಗಳನ್ನು ಟ್ರೋಲ್‌ ಮಾಡುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್