ಕೊಪ್ಪಳ | ಸತೀಶ್‌ ಜಾರಕಿಹೊಳಿ ಬೆಂಬಲಿಸಿ ದಲಿತ ಸಂಘಟನೆಗಳ ಪ್ರತಿಭಟನೆ

  • 'ಜಾರಕಿಹೊಳಿ ಅವರನ್ನು ಮೂಲೆಗುಂಪು ಮಾಡುವ ಹುನ್ನಾರ'
  • 'ದಲಿತ ನಾಯಕನೆಂಬ ಕಾರಣಕ್ಕೆ ಸತೀಶ್‌ ಜಾರಿಕಿಹೊಳಿ ಟಾರ್ಗೆಟ್'

ಪರ್ಷಿಯನ್ ಭಾಷೆಯಲ್ಲಿರುವ ಹಿಂದು ಪದದ ಅರ್ಥವನ್ನೇ ಕಾರ್ಯಕ್ರಮವೊಂದರಲ್ಲಿ ಹೇಳಿದ್ದೇ ಧರ್ಮಕ್ಕಾದ ಅಪಮಾನವೆಂದು ಬಿಜೆಪಿ ಸರ್ಕಾರ ಸತೀಶ್ ಜಾರಕಿಹೊಳಿ ಅವರ ತೇಜೋವಧೆ ಮಾಡುತ್ತಿದೆ ಎಂದು ಮಾನವ ಬಂಧುತ್ವ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆರೋಪಿಸಿವೆ.

ಕೊಪ್ಪಳದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು, ಉಪ ತಹಶೀಲ್ದಾರ ಗವಿಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಮಾನವ ಬಂಧುತ್ವ ಮುಖಂಡ ಯಮನೂರಪ್ಪ ನಾಯಕ, "ಸತೀಶ್ ಜಾರಕಿಹೊಳಿಯವರು ಯಾವುದೇ ಜಾತಿ-ಧರ್ಮದ ವಿರುದ್ದ ಮಾತನಾಡಿಲ್ಲ. ಸತೀಶ್‌ ಜಾರಕಿಹೊಳಿ ದಲಿತ ನಾಯಕರಾಗಿರುವ ಕಾರಣಕ್ಕೆ ಅವರ ಹೇಳಿಕೆಗೆ ರಾಜಕೀಯ ಬೆರೆಸಿ ಅವರ ವಿರುದ್ಧ ಸಂಚು ರೂಪಿಸಲಾಗುತ್ತಿದೆ" ಎಂದು ಕಿಡಿಕಾರಿದರು. 

Eedina App

"ದಲಿತರು ದೇವಸ್ಥಾನ ಒಳಗೆ ಬಂದರೆ ನಮ್ಮನ್ನು ಜಾತಿ ತಾರತಮ್ಯ ಮಾಡುತ್ತಾರೆ. ದಲಿತರಿಗೆ ಸ್ಮಶಾನದಲ್ಲಿ, ದೇವಸ್ಥಾನಗಳಲ್ಲಿ ಸಮಾನತೆ ಕೊಡಿ. ನಂತರ ಧರ್ಮದ ಬಗ್ಗೆ ಮಾತನಾಡಿ" ಎಂದು ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದರು. 

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹನುಮೇಶ ನಾಯಕ ಮಾತನಾಡಿ, "ಸತೀಶ ಜಾರಕಿಹೊಳಿ ವಿರುದ್ದ ಷಡ್ಯಂತ್ರ್ಯ ನಡೆದಿದೆ. ಪರ್ಷಿಯನ್ ಭಾಷೆಯಲ್ಲಿ ಹಿಂದು ಪದದ ಬಗ್ಗೆ ಇರುವ ಅರ್ಥವನ್ನು ಅವರrು ಹೇಳಿದ್ದಾರೆ. ಆದರೆ, ಅವರ ಹೇಳಿಕೆಯನ್ನು ತಿರುಚಿ, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಜಾರಕಿಹೊಳಿ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಅವರನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. 

AV Eye Hospital ad

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಟಿ.ರತ್ನಾಕರ.  ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ, ಮಾಲತಿ ನಾಯಕ, ಜ್ಯೋತಿ ಎಂ. ಗೊಂಡಬಾಳ, ಶಿವಮೂರ್ತಿ ಗುತ್ತೂರು, ಕೆ.ಎಸ್.ಮೈಲಾರಪ್ಪ ವಕೀಲರು, ಶಿವಪುತ್ರಪ್ಪ ಗುಮಗೇರಿ, ಮಂಜುನಾಥ ಜಿ. ಗೊಂಡಬಾಳ, ರಮೇಶ ನಾಯಕ, ಕೊಟೇಶ ನಾಯಕ, ಯಮನೂರಪ್ಪ ಗೊರ್ಲೆಕೊಪ್ಪ, ಸುಮಂಗಲಾ ಗಿಣಗೇರಿ, ಶೇಖರ ಇಂದರಗಿ, ಅವಿನಾಳಪ್ಪ ತಳಬಾಳ, ಮೆಹಬೂಬ ಖಾನ್ ಸೇರಿದಂತೆ ಅನೇಕ ಮುಖಂಡರು, ನೂರಾರು ಜನರು ಭಾಗವಹಿಸಿದ್ದರು.

ರಫಿ ಗಂಗಾವತಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app