ಮೈಸೂರು | ಅಪ್ಪು ನೆನಪಿನಲ್ಲಿ ಮಿಷನ್‌ ಆಸ್ಪತ್ರೆಗೆ ಆಂಬುಲೆನ್ಸ್‌ ನೀಡಿದ ನಟ ಪ್ರಕಾಶ್‌ರಾಜ್ 

Mysore
  • ಪ್ರತಿ ಜಿಲ್ಲೆಗೂ 'ಅಪ್ಪು ಎಕ್ಸ್‌ಪ್ರೆಸ್' ಆಂಬುಲೆನ್ಸ್ ನೀಡುವ ಯೋಜನೆ
  • ಅಪ್ಪು ಹೆಸರಿನಲ್ಲಿ ಬ್ಲಡ್ ಬ್ಯಾಂಕ್‌ ಸ್ಥಾಪಿಸಲು ನಿರ್ಧಾರ

ಬಹುಭಾಷಾ ನಟ, ಕನ್ನಡಿಗ ಪ್ರಕಾಶ ರಾಜ್ ತಮ್ಮ ‘ಪ್ರಕಾಶ್‌ ರಾಜ್ ಫೌಂಡೇಷನ್’ ವತಿಯಿಂದ  'ಅಪ್ಪು ಎಕ್ಸ್‌ಪ್ರೆಸ್' ಎಂದು ನಾಮಕರಣವಾಗಿರುವ ಆಂಬುಲೆನ್ಸ್ ಅನ್ನು ಮೈಸೂರಿನ ಸಿಎಸ್ಐ ಹೋಲ್ಡ್ಸ್‌ವರ್ತ್ ಸ್ಮಾರಕ (ಮಿಷನ್) ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ.

"ಒಂದು ವರ್ಷದಲ್ಲಿ ‘ಅಪ್ಪು ಎಕ್ಸ್‌ಪ್ರೆಸ್’ ಹೆಸರಿನ ಆಂಬುಲೆನ್ಸ್‌ಗಳನ್ನು ರಾಜ್ಯ ಪ್ರತಿ ಜಿಲ್ಲೆಗೂ ನೀಡುವ ಯೋಜನೆಯಿದೆ. ಕೋವಿಡ್‌ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯವನ್ನು ಗಮನಿಸಿ ನಮ್ಮ ಫೌಂಡೇಷನ್‌ಗೆ ಪುನೀತ್‌ ರಾಜ್‌ಕುಮಾರ್ 2 ಲಕ್ಷ ರೂಪಾಯಿ ದೇಣಿಗೆ ಕೊಟ್ಟಿದ್ದರು. ಅವರು ಜೀವಂತವಿದ್ದಿದ್ದರೆ ಮಾಡಬಹುದಾದ ಕೆಲಸವನ್ನು ನಾವು ಮಾಡುವ ಮೂಲಕ ಹೆಸರನ್ನು ಉಳಿಸಿಕೊಳ್ಳಬೇಕಾಗಿದೆ” ಎಂದು ಪ್ರಕಾಶ್‌ ರಾಜ್ ಹೇಳಿದ್ದಾರೆ.  

Eedina App

ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ | ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಹೃದಯಾಘಾತದಿಂದ ಸಾವು

“ಆ ಒಂದು ಕ್ಷಣದಲ್ಲಿ ಆಂಬುಲೆನ್ಸ್‌ ಇದಿದ್ದರೆ ಅಪ್ಪು ಇಂದು ಜೀವಂತವಾಗಿ ಇರುತ್ತಿದ್ದರೋ ಏನೋ? ಈ ಕಾರಣಕ್ಕಾಗಿಯೇ ಆಂಬುಲೆನ್ಸ್‌ನ್ನು ಉಡುಗೊರೆಯಾಗಿ ನೀಡಿದ್ದೇನೆ. ಬಡವರಿಗಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಮಿಷನ್‌ ಆಸ್ಪತ್ರೆಯನ್ನು ಈ ಸತ್ಕಕಾರ್ಯಕ್ಕೆ ಆಯ್ಕೆ ಮಾಡಿಲಾಗಿದೆ” ಎಂದು ಪ್ರಕಾಶ್‌ ಹೇಳಿದ್ದಾರೆ.

AV Eye Hospital ad
Mysore

ಮಿಷನ್ ಆಸ್ಪತ್ರೆಯ ವೈದ್ಯರು ಬ್ಲಡ್ ಬ್ಯಾಂಕ್ ಸ್ಥಾಪಿಸಿ ಕೊಡುವಂತೆ ಮನವಿ ಮಾಡಿದ್ದು, ಆದಷ್ಟು ಬೇಗನೆ ಅಪ್ಪು ಹೆಸರಿನಲ್ಲಿ ಬ್ಲಡ್ ಬ್ಯಾಂಕ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಂಬುಲೆನ್ಸ್‌ ಹಸ್ತಾಂತರದ ವೇಳೆ ಪ್ರಕಾಶ್‌ ರಾಜ್‌ ಜೊತೆ ನಿರ್ದೇಶಕ ಸಂತೋಷ ಆನಂದ್ ರಾಮ್ ಇದ್ದರು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app