ನರೇಂದ್ರ ಮೋದಿ ರಾಜ್ಯ ಪ್ರವಾಸ| ಬಿಜೆಪಿ ನಾಯಕರಿಂದ ಆತ್ಮೀಯ ಸ್ವಾಗತ, ಮಿದುಳು ಸಂಶೋಧನಾ ಕೇಂದ್ರ ಉದ್ಘಾಟನೆ

Modi
  • ಮೋದಿಗೆ ಶಾಲು ಹೊದಿಸಿ, ಪುಸ್ತಕ ಕೈಗಿಟ್ಟು ಆತ್ಮೀಯತೆಯಿಂದ ಬರಮಾಡಿಕೊಂಡ ಬೊಮ್ಮಾಯಿ
  • ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೈ ಕುಲಕಿ ನಗುಮೊಗದಿ ಮಾತನಾಡಿಸಿದ ಮೋದಿ

ಎರಡು ದಿನಗಳ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಜ್ಯಕ್ಕೆ 11.55ಕ್ಕೆ ಬಂದಿಳಿದಿದ್ದಾರೆ. 

ಯಲಹಂಕ ಸೇನಾ ವಾಯುನೆಲೆಗೆ ಬಂದಿಳಿದ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸ್ವಾಗತಿಸಿದರು.

ಸಿಎಂ ಬೊಮ್ಮಾಯಿ ಅವರು ಮೋದಿ ಅವರಿಗೆ ಶಾಲು ಹೊದಿಸಿ, ಪುಸ್ತಕ ನೀಡುವ ಮೂಲಕ ಆತ್ಮೀಯ ಆಮಂತ್ರಣ ನೀಡಿ ಬರಮಾಡಿಕೊಂಡರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಮೋದಿ ಕೈ ಕುಲಕಿ ನಗುಮೊಗದಿ ಮಾತುಕಥೆ ನಡೆಸಿದ್ದು ವಿಶೇಷವಾಗಿತ್ತು. ಬಳಿಕ ಬೊಮ್ಮಾಯಿ ಜೊತೆ ಕ್ಷಣಕಾಲ ಮೋದಿ ಅವರು ಮಾತುಕಥೆ ನಡೆಸಿದರು.

ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ ಪ್ರಧಾನಿ

ಯಶವಂತಪುರದ ಸಿ ವಿ ರಾಮನ್‌ ರಸ್ತೆಯಲ್ಲಿರುವ ಐಐಎಸ್‌ಸಿ ಆವರಣದಲ್ಲಿನ ಮಿದುಳು ಸಂಶೋಧನಾ ಕೇಂದ್ರವನ್ನು 12.45ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹಾಗೂ ಐಐಎಸ್‌ಸಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

 

ನಿಮಗೆ ಏನು ಅನ್ನಿಸ್ತು?
0 ವೋಟ್