ಬೆಳ್ಳಿಯ ತಟ್ಟೆಯಲ್ಲಿ ಮೈಸೂರು ಪಾಕ್‌ ಸವಿದ ಪ್ರಧಾನಿ ನರೇಂದ್ರ ಮೋದಿ

Mysore pak
  • ಮೋದಿಯನ್ನು ಉಪಹಾರಕ್ಕೆ ಅಹ್ವಾನಿಸಿದ್ದ ರಾಜಮಾತೆ ಪ್ರಮೋದಾದೇವಿ ಒಡೆಯರ್‌
  • ರಾಜ ಪರಿವಾರದೊಂದಿಗೆ ದಕ್ಷಿಣ ಭಾರತದ ಉಪ್ಪಿಟ್ಟು, ಇಡ್ಲಿ, ಅವಲಕ್ಕಿ ಸವಿದ ಪ್ರಧಾನಿ

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಮನೆತನದಿಂದ ಮೈಸೂರ್‌ ಪಾಕ್‌ ಸವಿಯುವ ಯೋಗ ಒದಗಿ ಬಂತು.  

ಅರಮನೆ ಆವರಣದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿಯವರನ್ನು ಉಪಹಾರಕ್ಕಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಆಹ್ವಾನಿಸಿದರು. 

ಇದಕ್ಕೆಂದೇ ಅರಮನೆ ಆಡಳಿತ ಸೋಮವಾರವೇ ಸಿದ್ಧತೆ ಮಾಡಿಕೊಂಡಿತ್ತು. ವಿಶ್ವ ಪ್ರಸಿದ್ಧ ಮೈಸೂರು ಪಾಕ್‌ ಸಿಹಿ ತಿನಿಸಿನ ಜೊತೆ ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿಗಳಾದ ಉಪ್ಪಿಟ್ಟು, ಇಡ್ಲಿ, ಅವಲಕ್ಕಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. 

ಈ ಸುದ್ದಿ ಓದಿದ್ದೀರಾ? ಅಗ್ನಿಪಥ್‌ | ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ

ಯೋಗ ಕಾರ್ಯಕ್ರಮದ ಬಳಿಕ ಅರಮನೆಗೆ ಭೇಟಿ ನೀಡಿದ ಮೋದಿ ಅವರು ರಾಜ ಪರಿವಾರದೊಂದಿಗೆ ಬೆಳ್ಳಿಯ ತಟ್ಟೆಯಲ್ಲಿ ಉಪಹಾರ ಸೇವಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್