ನಿಷೇಧಿತ ಮಾದಕ ವಸ್ತು ಮಾರಾಟ: ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯನ್ನು ಬಂಧಿಸಿದ ಮಂಗಳೂರು ಪೊಲೀಸರು

Arrested news
  • ರಿಪಬ್ಲಿಕ್ ಆಫ್ ಸೌತ್ ಸುಡಾನ್‌ನ ನಿವಾಸಿ ಡ್ಯಾನಿ ಬಂಧನ
  • ಜೂ. 15ರಂದು ಮಂಗಳೂರಿನಲ್ಲಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು

ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸೆನ್ ಅಪರಾಧ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಲತಃ ರಿಪಬ್ಲಿಕ್ ಆಫ್ ಸೌತ್ ಸುಡಾನ್‌ನ ನಿವಾಸಿ, ಹಾಲಿ ಬೆಂಗಳೂರಿನ ಗುಂಜುರುಪಾಳ್ಯದಲ್ಲಿ ವಾಸವಿದ್ದ ಲೂಯಲ್ ಡೇನಿಯಲ್ ಜಸ್ಟೀನ್ ಬೌಲೋ ಯಾನೆ ಡ್ಯಾನಿ(25) ಎಂದು ಗುರುತಿಸಲಾಗಿದೆ.

2022ರ ಜೂನ್ 15ರಂದು ಸಿಸಿಬಿ ಪೊಲೀಸರು ಮಂಗಳೂರಿನ ಪಡೀಲ್ ಬಳಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ಕು ಜನರನ್ನು ಬಂಧಿಸಿ, 125 ಗ್ರಾಂ ನಿ‍ಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಅಪಘಾತಕ್ಕೆ ತುತ್ತಾದ ವಿದ್ಯಾರ್ಥಿನಿ ಮೆದುಳು ನಿಷ್ಕ್ರಿಯ: ಅಂಗಾಂಗ ದಾನ

ತನಿಖೆ ಮುಂದುವರಿಸಿದ್ದ ಸೆನ್ ಕ್ರೈ ಪೊಲೀಸರು, ಈ ಹಿಂದೆ ಆರೋಪಿಗಳಿಗೆ ಮಾದಕ ವಸ್ತು ಮಾರಾಟ ಮಾಡಿದ್ದ ಆರೋಪಿ ಡ್ಯಾನಿಯನ್ನು ಬೆಂಗಳೂರಿನಲ್ಲಿ ಬುಧವಾರ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180