ಒಂದು ನಿಮಿಷದ ಓದು| ಹಾಸನದಲ್ಲಿ ಸೆ. 15ಕ್ಕೆ ದಲಿತ ಸಂಘಟನೆಗಳಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ

“ಸಂವಿಧಾನ ವಿರೋಧಿ, ಜನ ವಿರೋಧಿ, ಜಾತಿವಾದಿ ಸಂಘಟನೆಗಳು ದಲಿತರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು ಮತ್ತು ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯ ಮತ್ತು ಅಂಬೇಡ್ಕರ್ ಅವಹೇಳನ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ಇತ್ತೀಚೆಗೆ ಸಕಲೇಶಪುರದಲ್ಲಿ ಗೋವಿನ ಹೆಸರಿನಲ್ಲಿ ನೈತಿಕ ಪೋಲಿಸ್‌ಗಿರಿ ನಡೆಸಿ ದಲಿತ ಮುಖಂಡನ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಖಂಡಿಸಿ ಹಾಸನ ಜಿಲ್ಲಾ ದಲಿತ ಜನಪರ ಸಂಘಟನಗಳ ಒಕ್ಕೂಟದಿಂದ ಸೆ. 15ರಂದು ಹಾಸನ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಪ್ರತಿಭಟನೆ ವಿಚಾರವಾಗಿ ಚರ್ಚಿಸಲು ಸಕಲೇಶಪುರದ ಪ್ರವಾಸಿ ಮಂದಿರದಲ್ಲಿ (ಐ.ಬಿ) ಸೆ. 7ರಂದು ಮಧ್ಯಾಹ್ನ 2.30 ಕ್ಕೆ ಪೂರ್ವಭಾವಿ ಸಿದ್ಧತೆಯ ಸಭೆ ಆಯೋಜಿಸಲಾಗಿದೆ. ಸಭೆಗೆ ಜಿಲ್ಲೆಯ ದಲಿತ ಜನಪರ ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಆಗಮಿಸುತಿದ್ದಾರೆ. 

ಸಭೆಗೆ ತಾಲ್ಲೂಕಿನ ಎಲ್ಲ ದಲಿತ ಮುಖಂಡರು ಮತ್ತು ದಲಿತ, ಜನಪರ, ಪ್ರಗತಿಪರ ಸಂಘಟನೆಯ ಮುಖಂಡರು, ಕಾರ್ಯಕರ್ತರು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸಹಕಾರ ತಿಳಿಸಿ ಎಂದು ದಲಿತ ಮುಖಂಡ ಮತ್ತು ವಕೀಲ ವೇಣುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್