
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೊ ಪಲ್ಟಿಯಾಗಿ 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕುಣಿಕಲ್ಲೂರ ಗ್ರಾಮದಿಂದ ಸಂತೇಕಲ್ಲುರಹಾಗೂ ಲಿಂಗಸಗೂರಿಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ, ಕಟ್ಟಿಮನಿ ಕರೆ ಕ್ರಾಸ್ ಬಳಿ ಪಲ್ಟಿಯಾಗಿದೆ. ಅಪಘಾತದಲ್ಲಿ ಸುಮಾರು 25ಕ್ಕೂ ಹೆಚ್ಚು ಮಕ್ಕಳು ಗಾಯಾಗೊಂಡಿದ್ದಾರೆ.
ದಿನನಿತ್ಯ ಶಾಲೆಗೆ ಆಟೋದಲ್ಲಿ ಮಕ್ಕಳು ತೆರಳುತ್ತಿದ್ದರು. ಆಟೋ ಚಾಲಕ ಮದ್ಯ ಸೇವಿಸಿದ್ದನೆಂದು ಹೇಳಾಗಿದೆ. ಮದ್ಯದ ಅಮಲಿನಲ್ಲಿ ಚಾಲಕನ ವೇಗವಾಗಿ ಆಟೋ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡ ಆಟೋ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಕೆಲವು ವಿಧ್ಯಾರ್ಥಿಗಳನ್ನು ಲಿಂಗಸಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುವರು ವಿದ್ಯಾರ್ಥಿಗಳ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ರಾಯಚೂರು ಜಿಲ್ಲಾ ಆಸ್ಪತ್ರೆ ರವಾನಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.