ರಾಯಚೂರು| ‘ಕೇಸರಿ’ ಧ್ವಜ ಎತ್ತರಕ್ಕೆ ಹಾರಿಸಿ ‘ರಾಷ್ಟ್ರಧ್ವಜ’ಕ್ಕೆ ಅವಮಾನ; ಸಾಮಾಜಿಕ ಜಾಲತಾಣದಲ್ಲಿ ಖಂಡನೆ

Rayachur
  • ‘ಹರ್‍‌-ಘರ್‍‌-ತ್ರಿರಂಗಾ’ ಅಭಿಯಾನಕ್ಕೆ ಕೇಂದ್ರ ಸರ್ಕಾರ ಕರೆ
  • ಉದ್ದೇಶಪೂರ್ವಕವಾಗಿಯೇ ಮಾಡಿದ ಕೃತ್ಯ ಎಂಬ ಆರೋಪ

ಕೇಂದ್ರ ಸರ್ಕಾರದ ‘ಹರ್‍‌-ಘರ್‍‌-ತ್ರಿರಂಗಾ’ ಅಭಿಯಾನದಡಿ ಎಲ್ಲರ ಮನೆಯಲ್ಲೂ ರಾಷ್ಟ್ರ ಬಾವುಟ ಹಾರಿಸಲು ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ನಾನಾ ಭಾಗಗಳಲ್ಲಿ ಸಾರ್ವಜನಿಕರು ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದಾರೆ. ಇದರ ಮಧ್ಯೆ ಕೆಲ ಕಿಡಿಗೇಡಿಗಳು ‘ಕೇಸರಿ’ ಧ್ವಜವನ್ನು ಎತ್ತರಕ್ಕೆ ಹಾರಿಸಿ ‘ರಾಷ್ಟ್ರಧ್ವಜ’ಕ್ಕೆ ಅವಮಾನ ಮಾಡಿದ್ದಾರೆ.

ರಾಷ್ಟ್ರಧ್ವಜ ಹಾರಿಸುವಾಗ ರಾಷ್ಟ್ರಧ್ವಜಕ್ಕಿಂತ ಬೇರೆ ಧ್ವಜ ಎತ್ತರದಲ್ಲಿ ಇರಬಾರದು ಎಂಬ ನಿಯಮವಿದ್ದರೂ ರಾಯಚೂರಿನ ಪ್ರತಿಷ್ಠಿತ ಕುಟುಂಬವೊಂದು ರಾಷ್ಟ್ರಧ್ವಜಕ್ಕಿಂತ ಕೇಸರಿ ಧ್ವಜವನ್ನು ಎತ್ತರಕ್ಕೆ ಹಾರಿಸಿ ಅಗೌರವ ತೋರಿದ್ದಾರೆ. ಇವರ ಕಿಡಿಗೇಡಿತನಕ್ಕೆ ಕೆಲ ಸಂಘ ಸಂಸ್ಥೆಗಳ ಮುಖಂಡರು ಸಾಮಾಜಿಕ ಜಾಲಾತಾಣಗಳಲ್ಲಿ ಫೊಟೊ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜಿಲ್ಲಾಡಳಿತ ಗಮನಿಸಿ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.  

ಈ ಸುದ್ದಿ ಓದಿದ್ದೀರಾ?: ಬಿಜೆಪಿ ಭ್ರಷ್ಟಾಚಾರದ ವಿರಾಟ್ ರೂಪ ಬಹಿರಂಗವಾಗಿದೆ: ಪ್ರಿಯಾಂಕ ಖರ್ಗೆ

ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುರುಗುಂಟ ಗ್ರಾಮದ ಮನೆಯೊಂದರಲ್ಲಿ ಸಾರ್ವಜನಿಕರೊಬ್ಬರು ರಾಷ್ಟ್ರಧ್ವಜವನ್ನು ತಗ್ಗಿಸಿ ಕೇಸರಿ ಧ್ವಜವನ್ನು ಎತ್ತರದಲ್ಲಿ ಹಾರಿಸಿದ್ದರು ಫೊಟೊ ಸಾಮಾಜಿಕ ಜಾಲಾತಾಣಗಳಲ್ಲಿ  ಹರಿದಾಡುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

Image
Rayachur

ಇವು ಉದ್ದೇಶಪೂರ್ವಕವಾಗಿಯೇ ಮಾಡಿದ ಕೃತ್ಯ ಎಂದು ಆರೋಪಿಸಲಾಗುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಕುರಿತು ತನಿಖೆ ನಡೆಸಿ ಪೊಲೀಸ್ ಇಲಾಖೆಯಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಸಾರ್ವಜನಿಕರು, ನಾನಾ ಸಂಘ-ಸಂಸ್ಥೆಗಳ ಮುಖಂಡರು ಆಗ್ರಹಿಸಿದ್ದಾರೆ.

ಮಾಸ್‌ ಮೀಡಿಯಾ ರಾಯಚೂರು ವಲಯ ಸಂಯೋಜಕ ಮೊಹಮ್ಮದ್‌ ರಫಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್