ಒಂದು ನಿಮಿಷದ ಓದು | ರಾಖಿ ರಂಪಾಟ: ಶಾಲೆಗೆ ನುಗ್ಗಿ ದಾಂಧಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರು

mangalore

ಒತ್ತಾಯಪೂರ್ವಕವಾಗಿ ರಾಖಿ ಕಟ್ಟಲಾಗುತ್ತಿದೆ ಎಂಬ ದೂರಿನ ಮೇಲೆ ಮಕ್ಕಳ ಕೈಯಲ್ಲಿದ್ದ  ರಾಖಿಯನ್ನು ಬಿಚ್ಚಿಸಿದಕ್ಕೆ ಕ್ರಿಶ್ಚಿಯನ್‌ ಶಾಲೆಗೆ ನುಗ್ಗಿ ಸಂಘಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ.

ಮಂಗಳೂರು ಹೊರವಲಯದಲ್ಲಿರುವ ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಗೆ ನುಗ್ಗಿದ ಕಾರ್ಯಕರ್ತರು ರಂಪಾಟ ಮಾಡಿದ್ದಾರೆ.

ಒತ್ತಡದಿಂದ ರಾಕಿ ಕಟ್ಟುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದರಿಂದಾಗಿ ರಾಕಿಗಳನ್ನು ಬಿಚ್ಚಿಸಿ ಕ್ರಮ ಕೈಗೊಳ್ಳಲಾಗಿತ್ತು ಎಂದು ಪ್ರಾಂಶುಪಾಲರು ಹೇಳಿದ್ದಾರೆ.

ದಾಂಧಲೆ ನಡೆಸಿದ ವಿಷಯ ತಿಳಿದ ಪೊಲೀಸರು ತಕ್ಷಣ ಶಾಲೆಗೆ ತೆರೆಳಿದ್ದಾರೆ. ಸಂಘಪರಿವಾರದ ಕಾರ್ಯಕರ್ತರು ವಾದಕ್ಕೆ ರೋಸಿ ಹೋದ ಆಡಳಿತ ಮಂಡಳಿ ಕೊನೆಗೆ ಕ್ಷಮೆಯಾಚಿಸಿ ವಿವಾದಕ್ಕೆ ಅಂತ್ಯ ಹಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್