ರಾಮನಗರ | ಮಲ್ಲೂರು ಗ್ರಾಮದಲ್ಲಿ ಪ್ರಾಣಿಗಳಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆ

  • ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ
  • ಸೆರೆಯಾಗಿರುವ ಚಿರತೆ ಕೊಳ್ಳೆಗಾಲದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಆರು ವರ್ಷದ ಗಂಡು ಚಿರತೆ ಶನಿವಾರ (ಆಗಸ್ಟ್ 13) ಸೆರೆಯಾಗಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯ ಮಲ್ಲೂರು ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆಯೊಂದು ದನ, ಕರು, ಕುರಿ, ಮೇಕೆಗಳ ಮೇಲೆ ದಾಳಿ ಮಾಡುತ್ತಿತ್ತು. ಹಾಗಾಗಿ ಗ್ರಾಮಸ್ಥರು ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಇಲಾಖೆ ಮಲ್ಲೂರು ಗ್ರಾಮದಲ್ಲಿ ಬೋನು ಇಟ್ಟಿತ್ತು. 

ಈ ಸುದ್ದಿ ಒದಿದ್ದೀರಾ? ಬೆಳಗಾವಿ | ಇನ್ನೂ ಸೆರೆಯಾಗದ ಚಿರತೆ: 22 ಶಾಲೆಗಳಿಗೆ ರಜೆ ಘೋಷಣೆ

"ಜಿಲ್ಲೆಯ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶನಿವಾರ ಮುಂಜಾನೆ ಆರು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಸೆರೆಯಾಗಿರುವ ಚಿರತೆಯನ್ನು ಕೊಳ್ಳೆಗಾಲದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು" ಎಂದು ವಲಯ ಅರಣ್ಯ ಅಧಿಕಾರಿ ಜಗದಿಶ್ ಗೌಡ ತಿಳಿಸಿರುವುದಾಗಿ ವರದಿಯಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್