ಒಂದು ನಿಮಿಷದ ಓದು | ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಫಲಿತಾಂಶ ಸಂಜೆ 6 ಗಂಟೆಗೆ ಪ್ರಕಟ

B C Nagesh

ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) ಹುದ್ದೆಗಳ ನೇಮಕ ಪರೀಕ್ಷೆ ಫಲಿತಾಂಶ ಬುಧವಾರ ಸಂಜೆ 6 ಗಂಟೆಗೆ ಪ್ರಕಟವಾಗಲಿದೆ. 

ಈ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಟ್ವೀಟ್‌ ಮಾಡಿ ತಿಳಿಸಿದ್ದು, “ಮೇ 2022 ತಿಂಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) ಹುದ್ದೆಗಳ ನೇಮಕ ಪರೀಕ್ಷೆ ನಡೆದಿತ್ತು. ಇಂದು ಸಂಜೆ 6 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗುವುದು” ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್