ʼಹೈಯರ್ ಅಥಾರಿಟಿಗಳ ಸೂಚನೆಯಿಂದ ಬರಲಾರೆʼ ಎಂದು ಸಂದರ್ಶನ ಮುಂದೂಡಿದ ರೋಹಿತ್‌ ಚಕ್ರತೀರ್ಥ!

rohith chakrathirtha
  • ಪಠ್ಯ ಪರಿಷ್ಕರಣೆ ಹಿನ್ನೆಲೆಯಲ್ಲಿ ರೋಹಿತ್‌ ಚಕ್ರತೀರ್ಥ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದ ಪತ್ರಕರ್ತ ಗೌರೀಶ್‌ ಅಕ್ಕಿ
  • ಚಕ್ರತೀರ್ಥ ಸಂದರ್ಶನಕ್ಕೆ ಸಾರ್ವಜನಿಕರಿಂದ ಹರಿದು ಬಂದಿದ್ದ ನೂರಾರು ಪ್ರಶ್ನೆಗಳು

“ನಿಮ್ಮಲ್ಲಿ ಒಂದಷ್ಟು ಜನರ ಹಾರೈಕೆ ಫಲಿಸಿದೆ. ರೋಹಿತ್ ಚಕ್ರತೀರ್ಥ ಅವರು ಸಂದರ್ಶನಕ್ಕೆ ಬರುತ್ತಿಲ್ಲ! ಹೈಯರ್ ಅಥಾರಿಟಿಗಳಿಂದ ಸದ್ಯಕ್ಕೆ ಮಾಧ್ಯಮಗಳ ಮುಂದೆ ಹೋಗದೇ ಇರಲು ನಿರ್ದೇಶನ ಬಂದ ಹಿನ್ನೆಲೆಯಲ್ಲಿ ಬರಲಾಗುವುದಿಲ್ಲ ಎಂದು ರೋಹಿತ್‌ ಅವರು ತಿಳಿಸಿದ್ದಾರೆ,” ಎಂದು ಪತ್ರಕರ್ತ ಗೌರೀಶ್‌ ಅಕ್ಕಿ ಹೇಳಿದ್ದಾರೆ.

ಪಠ್ಯ ಪರಿಷ್ಕರಣೆ ವಿವಾದ ತೀವ್ರವಾದ ಹಿನ್ನೆಲೆಯಲ್ಲಿ ಗೌರೀಶ್‌ ಅಕ್ಕಿ ಸ್ಟುಡಿಯೋಕ್ಕೆ ಸಂದರ್ಶನ ನೀಡುವಂತೆ ರೋಹಿತ್‌ ಚಕ್ರತೀರ್ಥರನ್ನು ಪತ್ರಕರ್ತ ಗೌರೀಶ್‌ ಅಕ್ಕಿ ಆಹ್ವಾನಿಸಿದ್ದರು.  ಈ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಮೂಲಕ ಚಕ್ರತೀರ್ಥರಿಗೆ ಏನೇನು ಪ್ರಶ್ನೆ ಕೇಳಲು ಬಯಸುತ್ತೀರಿ ತಿಳಿಸಿ ಎಂದು ಸಾರ್ವಜನಿಕರಿಗೆ ಫೇಸ್‌ಬುಕ್‌ ಮೂಲಕ ಗೌರೀಶ್‌ ಅಕ್ಕಿ ಆಹ್ವಾನ ನೀಡಿದ್ದರು.

Eedina App

ಶುಕ್ರವಾರ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು, ವಿವಾದಕ್ಕೆ ಇನ್ನಷ್ಟು ತೀವ್ರತೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಸಂದರ್ಶನದಿಂದ ಹಿಂದೆ ಸರಿದಿರುವ ಅನುಮಾನವಿದ್ದು, ಗೌರೀಶ್‌,  “ಸ್ವಲ್ಪ ದಿನಗಳ ನಂತರ ಬರುವ ಭರವಸೆಯನ್ನು ಕೊಟ್ಟಿದ್ದಾರೆ, ಎನಿವೇ ಧನ್ಯವಾದ,” ಎಂದು ಅಕ್ಕಿ  ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಏನಿದು ಸಂದರ್ಶನ ವಿವಾದ

AV Eye Hospital ad

“ನಾಳೆ ಒಂದು ಸಂದರ್ಶನಕ್ಕಾಗಿ ಗೌರೀಶ್‌ ಅಕ್ಕಿ ಸ್ಟೂಡಿಯೋಗೆ ಆಗಮಿಸುತ್ತಿದ್ದಾರೆ ರೋಹಿತ್ ಚಕ್ರತೀರ್ಥ! ಅತೀವ ಚರ್ಚೆಗೊಳಗಾಗಿರುವ ಪಠ್ಯಪುಸ್ತಕ ಪರಿಷ್ಕರಣೆಯ ಬಗ್ಗೆಯೇ ಈ ಮಾತುಕತೆ ನಡೆಯಲಿದೆ,” ಎಂದು ಗೌರೀಶ್‌ ಗುರುವಾರ ಫೇಸ್‌ಬುಕ್‌ನಲ್ಲಿ  ಹೇಳಿದ್ದರು.

ಮುಂದುವರಿದು, “ಈ ಬಗ್ಗೆ ಸಾಕಷ್ಟು ಓದಿರುತ್ತೀರಿ. ನಖ ಶಿಖಾಂತ ಸಿಟ್ಟು ಬಂದಿರಬಹುದು. ಅಥವಾ ಸರಿಯೇ ಅಲ್ವಾ ಇದು ಅಂತ ಅನ್ನಿಸಿರಬಹುದು. ಅಥವಾ ಯಾವುದೇ ಪೂರ್ವಾಗ್ರಹ ಇಲ್ಲದೇ ನೋಡಿದರೂ, (ಯಾವ ಪಂಥಕ್ಕೂ ದಕ್ಕದವರಿಗೂ) ಒಂದಷ್ಟು ಪ್ರಶ್ನೆಗಳೂ ಕಾಡಿರಬಹುದು. ಅನುಮಾನಗಳೂ ಬಂದಿರಬಹುದು. ಇಂಥ ಪ್ರಶ್ನೆಗಳು ನಿಮ್ಮ ಬಳಿ ಇದ್ದರೇ ದಯವಿಟ್ಟು ಫೇಸ್‌ಬುಕ್‌ ಕಮೆಂಟ್ ನಲ್ಲಿ ತಿಳಿಸಿ. ನಿಮ್ಮ ಪರವಾಗಿ ನಾನು ಪ್ರಶ್ನೆ ಕೇಳುತ್ತೇನೆ,” ಎಂದು ಗೌರೀಶ್‌ ಅಕ್ಕಿ ಪೋಸ್ಟ್‌ ಮಾಡಿದ್ದರು. 

ಈ ಸುದ್ದಿ ಓದಿದ್ದೀರಾ? ಪಠ್ಯ ಪುಸ್ತಕ ವಿವಾದ | ಏನೇನೋ ಕಲಿಸಲು ಮುಂದಾಗುವವರಿಗೆ ಮಗುವಿನ ಕೆಲವು ಪ್ರಶ್ನೆಗಳು

ಅಕ್ಕಿಯವರ ಪೋಸ್ಟ್‌ಗೆ 200ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು, ಇದರಲ್ಲಿ ಅನೇಕರು ಅವರನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಾಡ ದ್ರೋಹಿಯನ್ನು ಪಠ್ಯ ಪರಿಷ್ಕರಣೆಗೆ ನೇಮಿಸಿದ್ದೇ ತಪ್ಪು, ಬುದ್ಧಿ ಹೇಳಿ ಎಂದು ಕೆಲವರು ಸಲಹೆ ನೀಡಿದ್ದರೆ,  ಇನ್ನೊಬ್ಬರು 'ನಿಮ್ಮ ಪೋಸ್ಟುಗಳನ್ನು ನೋಡಿ ಜನಕ್ಕೆ ಗೊತ್ತಾಗುವುದು ಏನೆಂದರೆ, ನಿಮಗೆ ಮುಸುಲ್ಮಾನ ಅಂದರೆ ಆಗಲ್ಲ, ಅದಕ್ಕೂ ಮಿಗಿಲಾಗಿ ಜಾತ್ಯಾತೀತ ಅನ್ನೋದು ಯಾರೇ ಪ್ರತಿಪಾದನೆ ಮಾಡಿದರು ಅದು ಆಗಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಉದಾಹರಣೆಗೆ ಅಂಬೇಡ್ಕರ್, ಬಸವಣ್ಣ, ಕುವೆಂಪು, ಸಿದ್ಧರಾಮಯ್ಯ. ಇವಿಷ್ಟನ್ನು ನೀವು ಸರಿ ಎಂದು ಹೇಗೆ ವಾದಿಸುತ್ತೀರಿ' ಎಂದು ಕೇಳಿದ್ದಾರೆ. ಬಸವಣ್ಣನವರ ಪರಿಚಯ ತಿದ್ದಿದ್ದು ಏಕೆ? ಎಂಬ ಪ್ರಶ್ನೆಯೂ ಇದರಲ್ಲಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app