ಎರಡು ವರ್ಷಗಳ ನಂತರ ಮತ್ತೆ ಶಾಲಾ ಶೈಕ್ಷಣಿಕ ಪ್ರವಾಸ ಪ್ರಾರಂಭ: ವಿದ್ಯಾರ್ಥಿಗಳಲ್ಲಿ ಉತ್ಸಾಹ

  • ಶೈಕ್ಷಣಿಕ ಪ್ರವಾಸಕ್ಕೆ ಅನುಮತಿ ಅಗತ್ಯ
  • ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಪ್ರವಾಸ

ಕೊರೊನಾ ಸೋಂಕಿನ ಹಾವಳಿಯಿಂದಾಗಿ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಶೈಕ್ಷಣಿಕ ಪ್ರವಾಸಗಳು ಈಗ ಮತ್ತೆ ಆರಂಭವಾಗುತ್ತಿವೆ. ರಾಜ್ಯದ ವಿವಿಧ ಶಾಲೆಗಳು ಅಕ್ಟೋಬರ್‍‌ನಿಂದ ಜನವರಿ ನಡುವೆ ಹೆಚ್ಚಾಗಿ ಶೈಕ್ಷಣಿಕ ಪ್ರವಾಸಗಳನ್ನು ಕೈಗೊಳ್ಳುತ್ತಿವೆ. ಮಕ್ಕಳು ಪ್ರವಾಸದ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ.

ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಮೊದಲು ಮಕ್ಕಳ ಹಿತ ರಕ್ಷಣೆಗಾಗಿ ಶಾಲೆಗಳು ಹಲವು ನಿಯಮಗಳನ್ನು ಪಾಲಿಸಬೇಕಾಗಿದೆ. ಪ್ರವಾಸ ಕೈಗೊಳ್ಳುವ ಮುನ್ನ ರಾಜ್ಯ ಪ್ರವಾಸವಾ ಅಥವಾ ಅಂತರ್ ರಾಜ್ಯ ಪ್ರವಾಸವಾ ಎಂದು ಶಾಲೆಗಳು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ರಾಜ್ಯ ಪ್ರವಾಸವಾಗಿದ್ದರೆ ವಲಯ ಶಿಕ್ಷಣ ಅಧಿಕಾರಿಯ ಅನುಮತಿಯನ್ನು ಪಡೆಯಬೇಕು. ಹೊರ ರಾಜ್ಯಗಳಿಗೆ ಪ್ರವಾಸ ಹೋಗುವುದಾದರೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ (ಡಿಡಿಪಿಐ) ಅನುಮೋದನೆ ಪಡೆಯಬೇಕು. ಈ ನಿಯಮಗಳು ಎಲ್ಲ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ಅನ್ವಯಿಸುತ್ತದೆ.

Eedina App

ಇದುವರೆಗೆ 30 ಶಾಲೆಗಳು ಪ್ರವಾಸಕ್ಕೆ ಅನುಮತಿ ಕೋರಿದ್ದು, ಕೆಲವು ಶಾಲೆಗಳು ಅನುಮತಿ ಪಡೆದು ಪ್ರವಾಸ ಪೂರ್ಣಗೊಳಿಸಿವೆ. ಹೆಚ್ಚಾಗಿ ಶಾಲೆಗಳು ಮೈಸೂರು, ಬೆಂಗಳೂರು ಹಾಗೂ ಕೇರಳಕ್ಕೆ ಪ್ರವಾಸ ಆಯೋಜಿಸಲು ಅರ್ಜಿಗಳು ಬರುತ್ತಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. 

ಈ ಸುದ್ದಿ ಓದಿದ್ದೀರಾ?: ಮೈಸೂರು | ಮುಡಾ ಆಸ್ತಿ ಅಡವಿಟ್ಟು 14 ಕೋಟಿ ಸಾಲ ಪಡೆದ ವಂಚಕರು; ಎಫ್ಐಆರ್ ದಾಖಲು 

AV Eye Hospital ad

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಹಾಸನ ಜಿಲ್ಲೆಯ ದೊಡ್ಡಕೊಂಡಗುಳ ಸರ್ಕಾರಿ ಪ್ರಾರ್ಥಮಿಕ ಶಾಲೆಯ ಮುಖ್ಯಪಾಧ್ಯಾಯ ಕುಮಾರಸ್ವಾಮಿ, ”1 ರಿಂದ 7ನೇ ತರಗತಿ ಮಕ್ಕಳು ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎರಡು ವರ್ಷದಿಂದ ಯಾವುದೇ ಪ್ರವಾಸ ಕೈಗೊಂಡಿಲ್ಲ. ಕೊರೊನಾ ಸಮಯಕ್ಕೂ ಮೊದಲು ಒಂದು ದಿನದ ಪ್ರವಾಸವನ್ನು ಕೈಗೊಳ್ಳುತ್ತಿದ್ದೆವು. ಈಗ ಪ್ರವಾಸ ಹೋಗುವ ಬಗ್ಗೆ ಯೋಚಿಸಿಲ್ಲ. ಮಕ್ಕಳು ಚಿಕ್ಕವರಾಗಿದ್ದರಿಂದ ಪೋಷಕರ ಅನುಮತಿ ಪಡೆಯುವುದು ಅಗತ್ಯ. ಸಭೆ ನಡೆಸಿ ಪೋಷಕರ ಅನುಮತಿ ಪಡೆದ ಮೇಲೆಯೇ ಪ್ರವಾಸದ ಬಗ್ಗೆ ಯೋಚಿಸಬೇಕಾಗಿದೆ” ಎಂದರು.

ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಲಿಟಲ್ ಸ್ಟಾರ್  ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೀತಿ, “ ನಮ್ಮಲ್ಲಿ 1ರಿಂದ 10ನೇ ತರಗತಿಯವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಿಗೆ ಪ್ರವಾಸ ಎಂದರೆ ಬಹಳ ಪ್ರೀತಿ. ಈ ವರ್ಷ ಪ್ರವಾಸ ಕೈಗೊಳ್ಳುವ ಬಗ್ಗೆ ಇನ್ನೂ ಯೋಚಿಸಿಲ್ಲ. ಎಲ್ಲ ಅನುಕೂಲವಾದರೆ ಪ್ರವಾಸ ಕೈಗೊಳ್ಳುತ್ತೇವೆ” ಎಂದರು.

ಸಕಲೇಶಪುರದ ಹೆತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಶ್ರೀನಾಥ್ ಮಾತನಾಡಿ, ”ನಮ್ಮದು ವಸತಿ ಶಾಲೆಯಾದ್ದರಿಂದ ನಮಗೆ ಹಲವಾರು ನಿಯಮಗಳಿರುತ್ತವೆ. ನಮ್ಮ ಹೆಡ್ ಡಿಪಾರ್ಟ್ಮೆಂಟ್‌ನಿಂದ ಪ್ರವಾಸ ಮಾಡುವಂತೆ ಸೂಚನೆ ಬಂದರೆ, ನಾವು ಪ್ರವಾಸ ಕೈಗೊಳ್ಳುತ್ತೇವೆ. ಇದುವರೆಗೂ ನಮಗೆ ಯಾವುದೇ ಸೂಚನೆ ಬಂದಿಲ್ಲ” ಎಂದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app