ಶಿವಮೊಗ್ಗ | ನಗರಕ್ಕೆ ಎಡಿಜಿಪಿ ಭೇಟಿ: ಗುರುವಾರದವರೆಗೆ ಹಿಂಬದಿ ಸವಾರರಿಗೆ ನಿರ್ಬಂಧ

  • ಇಬ್ಬರು ಆರೋಪಿಗಳ ಬಂಧನ
  • ಮೂರು ದಿನ 144 ಸೆಕ್ಷನ್ ಜಾರಿ

ಸಾವರ್ಕರ್ ಫೋಟೋ ಗದ್ದಲದಿಂದ ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿ, ಸೋಮವಾರ ರಾತ್ರಿ ಗಸ್ತು ನಡೆಸಿದ್ದಾರೆ. 

ನಗರದ ಗಾಂಧಿಬಜಾರ್ ಬಳಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ನದೀಮ್ ಮತ್ತು ರೆಹಮಾನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ಅವರು ಹೇಳಿದ್ದಾರೆ. 

"ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ನಗರಕ್ಕೆ ನಿಯೋಜಿಸಲಾಗಿದೆ. ಅಲ್ಲದೆ, ರ್‍ಯಾಪಿಡ್ ಆಕ್ಷನ್ ಫೋರ್ಸ್‌ಅನ್ನೂ ಕೂಡ ಕರೆತರಲಾಗಿದೆ. ಮೂರು ಜನ ಅಡಿಷನಲ್ ಎಸ್‌ಪಿ, ಒಬ್ಬರು ಎಸ್‌ಪಿ ಲೆವೆಲ್ ಅಧಿಕಾರಿ, ಹತ್ತು ಜನ ಡಿಎಸ್‌ಪಿ ಹಾಗೂ ಹಲವು ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ" ಎಂದು ಅವರು ವಿವರಿಸಿದ್ದಾರೆ. 

"ಗುರುವಾರದವರೆಗೂ ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿಗೊಳಿಸಲಾಗಿದೆ. ಮುನ್ನಚ್ಚರಿಕೆಯ ದೃಷ್ಟಿಯಿಂದ ಹಿಂಬದಿ ಸವಾರರ ಸಂಚಾರಕ್ಕೆ ಮೂರು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ. ಯಾರ್ಯಾರು ಏನೇನು ಮಾಡಿದ್ದಾರೆಂಬ ಸುಳಿವು ಸಿಕ್ಕಿದೆ. ಎಲ್ಲ ಕೃತ್ಯಗಳ ಹಿಂದೆ ಕೆಲವು ಸಂಘಟನೆಗಳ ಕೈವಾಡ ಇದೆಯಾ ಎಂಬ ಕುರಿತು ಈಗಲೇ ಮಾಹಿತಿ ನೀಡಲು ಸಾಧ್ಯವಿಲ್ಲವೆಂದು" ಅವರು ತಿಳಿಸಿದ್ದಾರೆ. 

"ಪ್ರೇಮ್ ಸಿಂಗ್ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಆತ ರಾಜಸ್ಥಾನದ ಮೂಲದವರಾಗಿದ್ದಾರೆ" ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್