ಶಿವಮೊಗ್ಗ | ಪಾಲಿಕೆಯಿಂದ ನಗರದಾದ್ಯಂತ ಫ್ಲೆಕ್ಸ್‌ ತೆರವು ಕಾರ್ಯಾಚರಣೆ

  • ಶಿವಮೊಗ್ಗದಲ್ಲಿ ಫ್ಲೆಕ್ಸ್‌ ವಿಚಾರಕ್ಕೆ ನಡೆದ ಗಲಾಟೆ
  • ಪಾಲಿಕೆಯ 80 ಸಿಬ್ಬಂದಿಗಳಿಂದ ಫ್ಲೆಕ್ಸ್ ತೆರವು 

ಶಿವಮೊಗ್ಗದಲ್ಲಿ ಫ್ಲೆಕ್ಸ್‌ ವಿಚಾರಕ್ಕೆ ಗಲಾಟೆ ನಡೆದು ಒಬ್ಬರ ಹತ್ಯೆಯಾಗಿದೆ. ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ನಗರ ಪಾಲಿಕೆ, ನಗರದ ವಿವಿಧ ಭಾಗಗಳಲ್ಲಿ ಹಾಕಲಾಗಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದೆ.

ಫ್ಲೆಕ್ಸ್‌ಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ ಆರ್‌ ಸೆಲ್ವಾಮಣಿ ಅವರು ಪಾಲಿಕೆಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ  ನಡೆಯುತ್ತಿದೆ. 80 ಮಂದಿ ಪಾಲಿಕೆ ಸಿಬ್ಬಂದಿಗಳು ನಗರದಾದ್ಯಂತ ಫ್ಲೆಕ್ಸ್‌ ತೆರವುಗೊಳಿಸುವುದರಲ್ಲಿ ನಿರತರಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೂಲಭೂತ ಹಕ್ಕನ್ನು ಉಲ್ಲಂಘಿಸದಂತೆ ನ್ಯಾಯ ದೊರಕಿಸುವುದೇ ಸ್ವಾತಂತ್ರ್ಯ: ನ್ಯಾಯಮೂರ್ತಿ ವಿಜಯಕುಮಾರ್

ಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, “ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಫ್ಲೆಕ್ಸ್‌ಗಳನ್ನು ಹಾಕಲು ಅವಕಾಶ ನೀಡಲಾಗಿತ್ತು. ಇದೀಗ ಸ್ವಾತಂತ್ರ್ಯೋತ್ಸವ ಮುಗಿದಿದೆ. ಕೆಲವೆಡೆ ಬಾವುಟಗಳನ್ನು ಕೆಳಗಿಳಿಸಿಲ್ಲ. ಹಾಗಾಗಿ ನಿಯಮಾನುಸಾರ ಕೆಳಗಿಳಿಸಲಾಗುವುದು” ಎಂದು ಹೇಳಿದರು.

“ಇಡೀ ರಾತ್ರಿ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ಇದೀಗ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್