ಶಿವಮೊಗ್ಗ | ಸಂತ್ರಸ್ಥರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರ; ಮಾಜಿ ಸಚಿವ ಕಾಗೋಡು ತಿಮ್ಮಪ್ಪ

  • ಅತಿವೃಷ್ಟಿಯಿಂದ ಭಾರಿ ಪ್ರಮಾಣದಲ್ಲಿ ಹಾನಿ
  • ಬೆಳೆಗಳು ನೀರು ಪಾಲು, ರೈತರು ಕಂಗಾಲು

ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದ ಅಪಾರ ನಷ್ಟ ಉಂಟಾಗಿದ್ದು, ಈ ಬಾರಿ ಹೆಚ್ಚಿನ ಅನಾಹುತ ಸಂಭವಿಸಿದೆ. ಶೀಘ್ರದಲ್ಲೆ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. 

ಶಿವಮೊಗ್ಗ ಜಿಲ್ಲೆಯಲ್ಲಿ ಹಾನಿಗೊಳಗಾದ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ ಮಾಜಿ ಸಚಿವರು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ, ”ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಮನೆ, ನಾಟಿ ಮಾಡಿದ ಗದ್ದೆಗಳು, ಅಡಿಕೆ ತೋಟ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಬಹುತೇಕ ಭಾಗಗಳಲ್ಲಿ ಹಕ್ಕು ಪತ್ರ ಇಲ್ಲದ ಮನೆಗಳು ಕುಸಿದು ಬಿದ್ದಿವೆ. ಹಾಗಾಗಿ ನೋಡಲ್ ಅಧಿಕಾರಿಗಳು ಮಾನವೀಯತೆ ತೋರುವ ಮೂಲಕ ನಷ್ಟದ ಅಂದಾಜು ತಯಾರಿಸಬೇಕು” ಎಂದು ತಿಳಿಸಿದರು. 

“ಜಿಲ್ಲೆಯ ಆನಂದಪುರ, ಆಚಾಪುರ, ಯಡೇಹಳ್ಳಿ ಭಾಗದಲ್ಲಿ ಅತಿವೃಷ್ಟಿಯಿಂದ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆಗಳು ನೀರು ಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ. ಹಲವು ಕುಟುಂಬಗಳಿಗೆ ನೆಲೆಯೂರಲು ಸೂರಿಲ್ಲದಂತಾಗಿದೆ. ಸರ್ಕಾರ ತಕ್ಷಣ ಪರಿಶೀಲಿಸಿ ಪರಿಹಾರಕ್ಕೆ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ರಸಗೊಬ್ಬರ ಕೊರತೆ, ದುಪ್ಪಟು ಬೆಲೆ, ನಕಲಿ ಗೊಬ್ಬರದ ಹಾವಳಿ: ಕಂಗಾಲಾದ ರೈತ

ಯಶೋದಮ್ಮ, ಬಸವರಾಜ್, ನಾಗರತ್ನಮ್ಮ, ನಜರುಲ್ಲಾ ಖಾನ್, ನಟರಾಜ್, ಕಲಿಮುಲ್ಲಾ, ಗಣಪತಿ ಯಡೇಹಳ್ಳಿ, ಜ್ಯೋತಿ ಕೋವಿ, ಹಾಜಿರಾಬಿ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್