ಶಿವಮೊಗ್ಗ | ಸ್ಮಶಾನ ವಿವಾದ; ಗ್ರಾಮ ಪಂಚಾಯತಿ ಮುಂಭಾಗವೇ ಶವ ಹೂಳಲು ಮುಂದಾದ ಕುಟುಂಬ

Shivamogga
  • ಸ್ಮಶಾನಕ್ಕೆ ಮೂರು ಎಕರೆ ಜಾಗ ಮಂಜೂರು ಮಾಡಿದ ಸರ್ಕಾರ
  • ಮಂಜೂರಾದ ಜಾಗದಲ್ಲಿ ಮನೆಗಳ ನಿರ್ಮಾಣ

ಸ್ಮಶಾನದಲ್ಲಿ ಅಂತಿಮ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯತ್‌ ಆವರಣದಲ್ಲಿಯೇ ಗುಂಡಿ ತೆಗೆದು ಶವ ಹೂಳಲು ಮುಂದಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಂತೆ ಕಡೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಸ್ಮಶಾನಕ್ಕೆಂದೆ ಮೂರು ಎಕರೆ ಜಾಗ ಮಂಜೂರಾಗಿತ್ತು. ಆದರೆ, ಆ ಜಾಗದಲ್ಲಿ ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಸ್ಮಶಾನದ ಜಾಗದ ಸರ್ವೇ ಮಾಡಲು ಅಧಿಕಾರಿಗಳು ಬಂದಾಗ ಅಲ್ಲಿನ ನಿವಾಸಿಗಳು ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿ, ಅಧಿಕಾರಿಗಳನ್ನೇ ಹಿಂದಿರುಗಿ ಕಳಿಸಿದ್ದಾರೆ. ಇದರಿಂದ ಊರಿನಲ್ಲಿ ಶವ ಸಂಸ್ಕಾರ ಮಾಡಲು ಜಾಗವಿಲ್ಲದೆ ಗ್ರಾಮಸ್ಥರು ಪರದಾಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ | ಶಾಸಕ ಯು ಟಿ ಖಾದರ್‌ಗೆ ರಾಜ್ಯ ಮುಸ್ಲಿಂ ಲೇಖಕರ ಸಂಘದಿಂದ ಸನ್ಮಾನ

ಗ್ರಾಮದ ಎ.ಕೆ ಕಾಲೋನಿಯಲ್ಲಿ ರಂಗಮ್ಮ ಎನ್ನುವವರು ವಯೋಸಹಜವಾಗಿ ಮೃತಪಟ್ಟಿದ್ದರು. ವೃದ್ದೆಯ ಶವ ಸಂಸ್ಕಾರ ಮಾಡಲು ಸರ್ಕಾರ ಮಂಜೂರು ಮಾಡಿದ ಸ್ಮಶಾನ ಜಾಗಕ್ಕೆ ತೆರಳಿದಾಗ, ಸ್ಮಶಾನದ ಜಾಗದಲ್ಲಿ ಮನೆ ನಿರ್ಮಸಿಕೊಂಡವರು ಶವ ಹೂಳಲು ಅವಕಾಶ ಮಾಡಿಕೊಡಲಿಲ್ಲವೆಂದು ಆರೋಪಿಸಲಾಗಿದೆ.

ಇದರಿಂದ ಆಕ್ರೋಶಗೊಂಡ ಕುಟುಂಬದವರು ಶವವನ್ನು ನೇರವಾಗಿ ಗ್ರಾಮ ಪಂಚಾಯತ್‌ ಆವರಣಕ್ಕೆ ತೆಗೆದುಕೊಂಡು ಹೋಗಿ ಗುಂಡಿ ತೋಡಿ ಹೂಳಲು ಮುಂದಾಗಿದ್ದರು. ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಕುಟುಂಬಸ್ಥರನ್ನು ಸಮಾಧಾನ ಮಾಡಿ ಬೇರೆಡೆ ಶವ ಸಂಸ್ಕಾರ ಮಾಡಲು ಮನವೊಲಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್