ಶಿವಮೊಗ್ಗ | ತೀವ್ರ ಜ್ವರಕ್ಕೆ ಬಲಿಯಾದ ಖೋ-ಖೋ ಕ್ರೀಡಾಪಟು

  • ಖೋ-ಖೋ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ವಿನಯ್
  • ಖೋ-ಖೋ ಆಟದಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಆಟಗಾರ

ಖೋ-ಖೋ ಕ್ರೀಡೆಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಖೋ-ಖೋ ಕ್ರೀಡಾಪಟು ವಿನಯ್ (33) ಮೆದುಳು ಜ್ವರದಿಂದ ಸೋಮವಾರ ತಡರಾತ್ರಿ ಉಡುಪಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಖೋ-ಖೋ ಆಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ವಿನಯ್ ರಾಷ್ಟ್ರಮಟ್ಟದಲ್ಲೂ ಕೂಡ ಖ್ಯಾತಿಗಳಿಸಿದ್ದರು. ಕರ್ನಾಟಕ ಸರ್ಕಾರದಿಂದ ನೀಡಲಾಗುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜರಾಗಿದ್ದರು. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಖೋ-ಖೋ ಕ್ರೀಡಾಕೂಟದಲ್ಲಿಯೂ ವಿನಯ್ ಚಿನ್ನದ ಪದಕ ಗೆದ್ದಿದ್ದರು.

ಈ ಸುದ್ದಿ ಓದಿದ್ದೀರಾ? ಕಳೆದು ಹೋದ ಕಟ್ಟಡ ಹುಡುಕಿಕೊಡಿ : ಪೊಲೀಸರಿಗೆ ದೂರು ನೀಡಿದ  ಆಮ್ ಆದ್ಮಿ ಪಾರ್ಟಿ 

ಕಳೆದ ಕೆಲವು ದಿನಗಳಿಂದ ಮೆದುಳು ಜ್ವರದಿದಂದ ಬಳಲುತ್ತಿದ್ದ ಅವರನ್ನು ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ತಡರಾತ್ರಿ ಮೃತಪಟ್ಟಿದ್ದಾರೆ.

ತೀರ್ಥಹಳ್ಳಿಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್