ಶಿವಮೊಗ್ಗ | ಪಿಎಫ್‌ಐ ಜಿಲ್ಲಾಧ್ಯಕ್ಷ ಬಂಧನ ಖಂಡಿಸಿ ಪ್ರತಿಭಟನೆ

SDPI
  • ಗುರುವಾರ ಬೆಳಗಿನ ಜಾವ ಶಾಹಿದ್ ಖಾನ್ ಬಂಧಿಸಿದ್ದ ಅಧಿಕಾರಿಗಳು
  • ಬಿಜೆಪಿ ಜನವಿರೋಧಿ ನೀತಿ ವಿರುದ್ಧ ಹೋರಾಡಿದ್ದಕ್ಕೆ ಬಂಧನ- ಆರೋಪ

ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವ ಪಿಎಫ್‌ಐ ಜಿಲ್ಲಾಧ್ಯಕ್ಷ ಶಾಹಿದ್ ಖಾನ್ ಬಂಧನ ಖಂಡಿಸಿ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್ ಮಾತನಾಡಿ, "ಶಾಹಿದ್ ಖಾನ್ ನಮ್ಮ ಸಮುದಾಯದ ಪ್ರಮುಖ ನಾಯಕರು. ಹಲವು ವರ್ಷದಿಂದ ಜನರ ಪರ ಹೋರಾಟದಲ್ಲಿ ಭಾಗವಹಿಸಿದ್ದರು. ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಿದ್ದಕ್ಕೆ ಅವರನ್ನು ಬಂಧಿಸಿದ್ದಾರೆ" ಎಂದು ಕಿಡಿಕಾರಿದರು.

"ಶಾಹಿದ್ ಖಾನ್ ಸೇರಿದಂತೆ ನಾನಾ ಜಿಲ್ಲಾ ಕಾರ್ಯಕರ್ತರನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿರುವುದು ಖಂಡನೀಯ. ಸಾಮಾಜಿಕ ಚಟುವಟಿಕೆಯಲ್ಲಿ ಮೂಂಚೂಣಿಯಲ್ಲಿರುವ ನಾಯಕರನ್ನು ಗುರಿಯಾಗಿಸಿ, ಮುಸ್ಲಿಂ ಎಂಬ ಕಾರಣಕ್ಕೆ ಬಂಧನ ಮಾಡಿದ್ದಾರೆ" ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?; ಕೋಲಾರ | ದಲಿತ ಬಾಲಕನಿಗೆ ದಂಡ; ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಮಕ್ಕಳ ರಕ್ಷಣಾ ಆಯೋಗ

ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಎನ್‌ಐಎ ರಾಜ್ಯ ಬಿಟ್ಟು ತೊಲಗಬೇಕು ಎಂದು ಎಸ್‌ಡಿಪಿಐ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಎಸ್‌ಡಿಪಿಐ ಕಾರ್ಯಕರ್ತರ ಭಾಗವಹಿಸಿದ್ದರು. ಪ್ರತಿಭಟನೆ ಹಿನ್ನೆಲೆ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

ಗುರುವಾರ ಬೆಳಗ್ಗೆ ರಾಷ್ಟ್ರೀಯ ತನಿಖಾ ತಂಡ ಶಿವಮೊಗ್ಗಾ ಲಷ್ಕರ್ ಮೊಹಲ್ಲಾದಲ್ಲಿರುವ ಶಾಹಿದ್ ಖಾನ್ ಮನೆ ಮೇಲೆ ರಾತ್ರಿ 2 ಗಂಟೆಗೆ ದಾಳಿ ಮಾಡಿ ಮುಂಜಾನೆ 5 ಗಂಟೆ ತನಕ ವಿಚಾರಣೆ ನಡೆಸಿದ್ದು, ನಂತರ ಶಾಹಿದ್ ಖಾನ್ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದೆ ಎನ್ನಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್