ಶಿವಮೊಗ್ಗ | ಸಂಜೆ ವ್ಯಾಪಾರ ವಹಿವಾಟಿಗೆ ಅನುಮತಿ ನೀಡುವಂತೆ ಮನವಿ

  • ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ವ್ಯಾಪಾರ ವಹಿವಾಟಿಗೆ ನಿರ್ಬಂಧ
  • ಸಂಜೆಯ ವ್ಯಾಪಾರ ವಹಿವಾಟು ನಿರ್ಬಂಧದಿಂದ ವ್ಯಾಪಾರಸ್ಥರಿಗೆ ಅನಾನುಕೂಲ

ಶಿವಮೊಗ್ಗದಲ್ಲಿ ಸಂಜೆಯ ಬಳಿಕ ವ್ಯಾಪಾರ ವಹಿವಾಟಿನ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಹಿಂಪಡೆಯುವಂತೆ ಒತ್ತಾಯಿಸಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳು ಜಿಲ್ಲಾಧಿಕಾರಿ ಡಾ. ಆರ್‌ ಸೆಲ್ವಾಮಣಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ದಿನದಂದು ಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ಶಿವಮೊಗ್ಗದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಹಾಗಾಗಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ವ್ಯಾಪಾರ ವಹಿವಾಟನ್ನು ನಿರ್ಬಂಧಿಸಲಾಗಿತ್ತು. "ನಿರ್ಬಂಧದಿಂದಾಗಿ ಸರಿಯಾಗಿ ವ್ಯಾಪಾರ ನಡೆಯುತ್ತಿಲ್ಲ. ವ್ಯಾಪರಸ್ಥರಿಗೆ ನಷ್ಟ ಉಂಟಾಗಿದೆ” ಎಂದು ಸಂಘವು ಹೇಳಿದೆ. 

ಈ ಸುದ್ದಿ ಓದಿದ್ದೀರಾ? ತುಮಕೂರು| ಸ್ವಾತಂತ್ರ್ಯೋತ್ಸವದ ಫ್ಲೆಕ್ಸ್‌ನಲ್ಲಿ'ಗಾಂಧೀಜಿ'ಯೊಂದಿಗೆ ಪ್ರತ್ಯಕ್ಷವಾದ 'ಗೋಡ್ಸೆ' ಫೋಟೊ; ಆಕ್ರೋಶ

“ಪ್ರಸ್ತುತ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಹಾಗಾಗಿ, ಇನ್ನು ಮುಂದೆ ಸಂಜೆ ನಂತರವೂ ವ್ಯಾಪಾರ ವಹಿವಾಟಿಗೆ ನಿಯಮಾನುಸಾರ ಅನುಮತಿ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುವ ಸಮಯದಲ್ಲಿ ಸಂಘದ ಅಧ್ಯಕ್ಷ ಎನ್‌. ಗೋಪಿನಾಥ್, ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹಕಾರ್ಯದರ್ಶಿ ಜಿ.ವಿಜಯಕುಮಾರ್ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್