ಆ.15: ಶಿವಮೊಗ್ಗ ಜಿಲ್ಲೆ ವಿಭಜನೆಗೊಂಡು ದಾವಣಗೆರೆ ಜಿಲ್ಲೆಯಾಗಿ ಇಂದಿಗೆ 25 ವರ್ಷ

  • ಹೊನ್ನಾಳಿ ತಾಲೂಕಿನ ಜನತೆಗೆ ಶಿವಮೊಗ್ಗವೇ ಅಚ್ಚುಮೆಚ್ಚು
  • ಹೊನ್ನಾಳಿ, ಚನ್ನಗಿರಿ 1997 ಆಗಸ್ಟ್ 15ರಂದು ದಾವಣಗೆರೆ ಜಿಲ್ಲೆಗೆ ಸೇರ್ಪಡೆ

ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಿ ಹೊನ್ನಾಳಿ ಹಾಗೂ ಚನ್ನಗಿರಿಯನ್ನು 1997 ಆಗಸ್ಟ್ 15ರಂದು ದಾವಣಗೆರೆಗೆ ಸೇರಿಸಿದರು. ಈ ಮೂಲಕ ದಾವಣಗೆರೆಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದ್ದರು.

ಜೆ ಎಚ್ ಪಟೇಲ್ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವಿಭಜಿತ ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಿ ಇಂದಿಗೆ 25 ವರ್ಷಗಳಾಗಿವೆ. ಆದರೂ, ಶಿವಮೊಗ್ಗ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಹೊನ್ನಾಳಿಯ ಹೆಚ್ಚಿನ ಜನತೆಗೆ ಪ್ರಸ್ತುತಕ್ಕೂ ಶಿವಮೊಗ್ಗ ಜಿಲ್ಲೆಯೇ ಅಚ್ಚುಮೆಚ್ಚು.

ಹೊನ್ನಾಳಿ ತಾಲೂಕು ಕೇಂದ್ರದಿಂದ ಶಿವಮೊಗ್ಗಕ್ಕೆ 40 ಕಿ ಮೀ ಅಂತರವಿದೆ. ದಾವಣಗೆರೆ 60 ಕಿಮೀ ದೂರದಲ್ಲಿದೆ. ಹೊನ್ನಾಳಿ ತಾಲೂಕಿನ ಪ್ರಮುಖ ಕೇಂದ್ರಗಳಾದ ಸವಳಂಗ, ಚೀಲೂರು ಶಿವಮೊಗ್ಗಕ್ಕೆ ಹತ್ತಿರದಲ್ಲಿವೆ. ಹಾಗಾಗಿ ವ್ಯಾವಹಾರಿಕ ದೃಷ್ಟಿಯಿಂದ ಹೊನ್ನಾಳಿಯ ಬಹುತೇಕ ಜನರು ಶಿವಮೊಗ್ಗವನ್ನು ನೆಚ್ಚಿಕೊಂಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಉಡುಪಿ | ಅಮೃತ ಸರೋವರ ಯೋಜನೆಯಡಿ ಉದ್ಘಾಟನೆಗೆ ಸಿದ್ಧವಾದ ಕೆರೆಬೆಟ್ಟು ಗ್ರಾಮದ ಕೆರೆ

ಯಾವುದೇ ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಿಗೆ, ದಾಖಲೆ ಪ್ರತಿಗಳನ್ನು ತೆಗೆದುಕೊಳ್ಳಲು 60 ಕಿಮೀ ದೂರದಲ್ಲಿರುವ ದಾವಣಗೆರೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ತಾಲೂಕು ಕೇಂದ್ರವಾದ ಹೊನ್ನಾಳಿ ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಂಡು 25 ವರ್ಷಗಳೇ ಕಳೆದರೂ ಹೊನ್ನಾಳಿ ತಾಲೂಕಿನ ಜನತೆಗೆ ಶಿವಮೊಗ್ಗ ಅಚ್ಚುಮೆಚ್ಚಿನ ತಾಣವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್