ಶೂಟೌಟ್ ಬರೀ ಸ್ಯಾಂಪಲ್, ಅಗತ್ಯ ಬಿದ್ದರೆ ರಾಜ್ಯದಲ್ಲಿ ಯೋಗಿ ಮಾದರಿ ಜಾರಿ: ಕೆ ಎಸ್‌ ಈಶ್ವರಪ್ಪ

K S Eshwarappa
  • ಭದ್ರಾವತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀಲ್ ಕುಮಾರನ ಆರೋಗ್ಯ ವಿಚಾರಿಸಿದ ಬಳಿಕ ಹೇಳಿಕೆ
  • ʼದೇಶದ್ರೋಹಿಗಳ ಕೈಯಲ್ಲಿ ರಾಜ್ಯ ಕಾಂಗ್ರೆಸ್‌ ಇದ್ದು, ಸಿದ್ದರಾಮಯ್ಯರನ್ನು ಪಕ್ಷದಿಂದ ಹೊರ ಹಾಕಬೇಕುʼ

ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, “ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರಿಗೆ ಶೂಟೌಟ್ ಮಾಡಿರುವುದು ಬರೀ ಸ್ಯಾಂಪಲ್. ಅಗತ್ಯ ಬಿದ್ದರೆ ಉತ್ತರ ಪ್ರದೇಶದ ಯೋಗಿ ಮಾದರಿ ಅಥವಾ ಅದಕ್ಕಿಂತ ಮೇಲಿನದನ್ನು ಜಾರಿ ಮಾಡಿ, ಮುಸ್ಲಿಂ ಗೂಂಡಾಗಳಿಗೆ ತಕ್ಕಪಾಠ ಕಲಿಸುತ್ತೇವೆ” ಎಂದಿದ್ದಾರೆ.

ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀಲ್ ಕುಮಾರನ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಆಕ್ರೋಶವಾಗಿ ಮಾತನಾಡಿದ್ದಾರೆ.

ಆಸ್ಪತ್ರೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತ ಏರು ದನಿಯಲ್ಲಿ “ನಾವು ಓಟು ಹಾಕಿದ್ದೇವೆ, ನಮ್ಮ ರಕ್ಷಣೆ ನೀವು ಮಾಡುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆ ವೇಳೆ ಗರಂ ಆದ ಈಶ್ವರಪ್ಪ, “ನಿಮಗಿಂತ ಹೆಚ್ಚಿನ ನೋವು ನನಗಾಗಿದೆ” ಎಂದರು.

“ಸಿದ್ದರಾಮಯ್ಯ ಸರ್ಕಾರದಲ್ಲಿ 32 ಹಿಂದೂಗಳ ಕೊಲೆಯಾಗಿದೆ. ಬಿಜೆಪಿ ಅವಧಿಯಲ್ಲಿ ಎರಡು ಕೊಲೆಯಾಗಿದೆ. ಹಾಗಂತ ಕೊಲೆಗಳನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಒಂದೇ ಒಂದು ಹಿಂದೂಗಳ ಕೊಲೆಯಾಗಬಾರದು. ಭದ್ರಾವತಿಯಲ್ಲಿ ಸುನೀಲ್ ಮೇಲೆ ಹಲ್ಲೆಯಾಗಿರುವುದನ್ನು ನಾವು ಸಹಿಸಲ್ಲ” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು| ತಲೆಬಾಗಬೇಕಿರುವುದು ಸಂವಿಧಾನಕ್ಕೆ ಹೊರತು ಆರ್‌ಎಸ್‌ಎಸ್‌ಗೆ ಅಲ್ಲ; ಬಿ ಕೆ ಹರಿಪ್ರಸಾದ್

“ಶಿವಮೊಗ್ಗದಲ್ಲಿ ನಡೆದ ಘರ್ಷಣೆ ನಂತರ ಭದ್ರಾವತಿಯಲ್ಲೂ ನೀಗಾ ವಹಿಸಲಾಗಿದ್ದು, ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಮಧ್ಯೆಯೇ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಗಿದ್ದು, ಸುನೀಲ್ ಸಾವಿನಿಂದ ಪಾರಾಗಿದ್ದಾರೆ. ಎಡ ಗೈ, ಭುಜ ಹಾಗೂ ತಲೆಗೆ ಹಲ್ಲೆಯಾಗಿದೆ. ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ  ಕೊಡಿಸಲಾಗುತ್ತಿದೆ” ಎಂದರು.

ದೇಶದ್ರೋಹಿಗಳ ಕೈಯಲ್ಲಿ ರಾಜ್ಯ ಕಾಂಗ್ರೆಸ್‌

ದೇಶದ್ರೋಹಿಗಳ ಕೈಯಲ್ಲಿ ರಾಜ್ಯ ಕಾಂಗ್ರೆಸ್‌ ಇದೆ. ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರ ಹಾಕುವುದೇ ಸೂಕ್ತ. ತಿಹಾರ್ ಜೈಲಿಗೆ ಹೋಗಿ ಬಂದ ಡಿ.ಕೆ.ಶಿವಕುಮಾರ್‌, ಪರಪ್ಪನ ಅಗ್ರಹಾರಕ್ಕೆ ‌ಹೋದ ನಲಪಾಡ್ ಹಾಗೂ ಮುಸ್ಲಿಮರ ಜಾಗದಲ್ಲಿ ಸಾವರ್ಕರ್ ಫೋಟೋ ಏಕೆ ಹಾಕಿದ್ದೀರಿ ಎನ್ನುವ ಸಿದ್ದರಾಮಯ್ಯ ದೇಶದ್ರೋಹಿಗಳು ಎಂದರು.

ನಿಮಗೆ ಏನು ಅನ್ನಿಸ್ತು?
1 ವೋಟ್