ಒಂದು ನಿಮಿಷದ ಓದು | ಅಪಘಾತದಲ್ಲಿ ಮಡಿದವರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟ ಸಿದ್ದರಾಮಯ್ಯ

Siddaramaiah

ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವಕ್ಕೆ ಆಗಮಿಸುವ ಮತ್ತು ವಾಪಸು ತೆರಳುವ ವೇಳೆ ವಾಹನ ಅಪಘಾತದಲ್ಲಿ ಸಾವಿಗೀಡಾದ ಅಭಿಮಾನಿಗಳ ಕುಟುಂಬಗಳನ್ನು ಖುದ್ದು ಭೇಟಿಮಾಡಿ, ಸಾಂತ್ವನ ಹೇಳುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ಅವರು, “ಸಾವಿಗೀಡಾದ ಇಬ್ಬರು ಅಭಿಮಾನಿಗಳ ಕುಟುಂಬದವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದೇನೆ. ಇವರ ಸಾವು ಮನಸ್ಸನ್ನು ತೀವ್ರ ಘಾಸಿಗೊಳಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಮತ್ತೊಮ್ಮೆ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

“ಅಪಘಾತದಲ್ಲಿ ಮಡಿದ ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿಯ ಫಸಿ ಉದ್ದೀನ್‌ ಮನೆಗೆ ಆಗಸ್ಟ್‌ 7ರಂದು ಮತ್ತು ಮುಧೋಳ ತಾಲ್ಲೂಕಿನ ಆಲಗುಂಡಿ ಗ್ರಾಮದ ಪ್ರಕಾಶ್‌ ಬಡಿಗೇರ ಮನೆಗೆ ಆಗಸ್ಟ್‌ 10ರಂದು ಖುದ್ದು ಭೇಟಿ ನೀಡಿ ಸಾಂತ್ವನ ಹೇಳುವೆ” ಎಂದು ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
3 ವೋಟ್