ಯಾದಗಿರಿ | ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವು; ಇಬ್ಬರಿಗೆ ಗಾಯ

  • ಅರಕೇರಾ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತ
  • ಮೂರು ವರ್ಷದ ಮಗುವಿಗೆ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಯಾದಗಿರಿ ಜಿಲ್ಲೆಯ ಅರಕೇರಾ ಗ್ರಾಮದ ಬಳಿ ಗುರುವಾರ ರಾತ್ರಿ 10.30ರ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಘಟನೆ ಸಂಬಂಧ ಯಾದಗಿರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "ಮೃತರನ್ನು ಹೀನಾ (30), ಇಮ್ರಾನ್ (22), ಮೊಹಮ್ಮದ್ ನಜರ್ ಹುಸೇನ್ (76), ನೂರ್‍‌ಜಹಾನ್ ಬೇಗಂ (70), ವಜೀದ್ ಹುಸೇನ್ (32), ಉಮೇಜಾ (1) ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕ್ತಿ ಫಜಲ್ ಹುಸೇನ್ (25) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ವರ್ಷದ ಮಗು ಬದುಕಿದ್ದು, ಗುಲ್ಬರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ತಿಳಿಸಿದರು.

"ಮೃತ ಹೀನಾ ಮತ್ತು ಇಮ್ರಾನ್ ಯಾದಗಿರಿಯ ಚಕ್ರಕಟ್ಟೆಯ ರಂಗನ್ ಮೊಹಲ್ಲಾ ನಿವಾಸಿಗಳಾಗಿದ್ದು, ಉಳಿದ ಐದು ಜನರು ಲಿಂಗಸುಗೂರು ತಾಲ್ಲೂಕಿನ (ರಾಯಚೂರು ಜಿಲ್ಲೆ) ಹಟ್ಟಿ ಗ್ರಾಮದ ನಿವಾಸಿಗಳು" ಎಂದು ಯಾದಗಿರಿ ಎಸ್‌ಪಿ ವೇದಮೂರ್ತಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ದ್ವಿಚಕ್ರ ವಾಹನಕ್ಕೆ ಮರಳು ತುಂಬಿದ ಲಾರಿ ಡಿಕ್ಕಿ: ವಿದ್ಯಾರ್ಥಿನಿ ಸಾವು

"ತೆಲಂಗಾಣದ ಕೊಡಂಗಲ್ ಜವಳ ಕಾರ್ಯಕ್ಕೆ ಹೋಗಿದ್ದ ಎಂಟು ಮಂದಿ ತಮ್ಮ ಊರಿಗೆ ಮರಳುತ್ತಿದ್ದರು. ಅವರು ಬರುತ್ತಿದ್ದ ಹ್ಯುಂಡೈ ಕಾರು ಟಾಟಾ ಗೂಡ್ಸ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180