ರಾಹುಲ್‌ ಗಾಂಧಿಗೆ ಜನ್ಮದಿನದ ಶುಭ ಕೋರಿದ ರಾಜ್ಯ ಕಾಂಗ್ರೆಸ್‌ ನಾಯಕರು

Rahul Gandhi
  • ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಪ್ರಮುಖ ನಾಯಕರಿಂದ ಶುಭ ಹಾರೈಕೆ
  • ಹಿಂದುಳಿದವರ ಕಷ್ಟಕ್ಕೆ ದನಿಯಾದ ರಾಹುಲ್‌ ಅವರ ಸಂಕಲ್ಪ ನಮಗೆ ಸ್ಪೂರ್ತಿ: ಡಿಕೆಶಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇಂದು (ಭಾನುವಾರ) ತಮ್ಮ 53ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ರಾಹುಲ್‌ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕ ಕಾಂಗ್ರೆಸ್‌ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ  ಪ್ರಮುಖ ನಾಯಕರು ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಶುಭ ಕೋರಿದ್ದಾರೆ.

“ರಾಹುಲ್‌ ಗಾಂಧಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರಿಗೆ ಸಂತೋಷ, ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯವನ್ನು ಬಯಸಿ ಶುಭಕೋರುವೆ. ಅವರ ಪ್ರಾಮಾಣಿಕತೆ ಮತ್ತು ಜನರ ಕಾರಣಗಳಿಗಾಗಿ ಹೋರಾಡುವ ಬದ್ಧತೆ ಯಾವಾಗಲೂ ಲಕ್ಷಾಂತರ ಭಾರತೀಯರಿಗೆ ಸ್ಫೂರ್ತಿಯಾಗಿರುತ್ತದೆ. ಭಾರತ ಎಲ್ಲ ಸಮಯದಲ್ಲೂ ರಾಹುಲ್ ಗಾಂಧಿ ಜೊತೆ ನಿಂತಿದೆ,” ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.

ವಿಧಾನ ಪರಿಷತ್‌ ಪ್ರತಿಕ್ಷದ ನಾಯಕ ಬಿ ಕೆ ಹರಿಪ್ರಸಾದ್‌ ಟ್ವಿಟ್ಟರ್‌ನಲ್ಲಿ ಶುಭ ಕೋರಿದ್ದು, “ನನ್ನ ಪ್ರೀತಿಯ ನಾಯಕ ರಾಹುಲ್‌ ಗಾಂಧಿ ಅವರಿಗೆ ಶುಭ ಹಾರೈಸುತ್ತೇನೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುವೆ. ನಮ್ಮ ದೇಶದ ಜನರಿಗೆ ಅವರ ದೂರದೃಷ್ಟಿ ಮತ್ತು ಸಂವಿಧಾನದ ಆದರ್ಶಗಳಿಗೆ ಬದ್ಧವಾದ ಗುಣ ನಮಗೆ ಅನುಕರಣೀಯವಾಗಿದೆ ಹಾಗೂ ಸ್ಫೂರ್ತಿ ನೀಡಿದೆ,” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸೋನಿಯಾ, ರಾಹುಲ್‌ ಗಾಂಧಿಗೆ ಇಡಿ ನೋಟಿಸ್‌ ಖಂಡಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

“ನಮ್ಮ ನಾಯಕ ರಾಹುಲ್‌ ಗಾಂಧಿ ಅವರಿಗೆ ಜನ್ಮದಿನದಂದು ಹೃದಯಪೂರ್ವಕವಾಗಿ ಶುಭಾಶಯ ತಿಳಿಸುತ್ತೇನೆ. ಪ್ರಜಾಪ್ರಭುತ್ವದ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ಮತ್ತು ಹಿಂದುಳಿದವರ ಕಷ್ಟಕ್ಕೆ ದನಿಯಾಗಿ ನಿಂತಿರುವ ನಿಮ್ಮ ಅಚಲವಾದ ಸಂಕಲ್ಪ ನಮಗೆಂದಿಗೂ ಸ್ಪೂರ್ತಿದಾಯಕ,” ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಶುಭ ಕೋರಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app