
ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಸಮಯದಲ್ಲಿ ಹಳ್ಳಿ ಸೊಗಡಿನ ಆಟಗಳನ್ನು ಪ್ರೋತ್ಸಾಹಿಸುವ ಉದ್ದೇಶಿದಂದ ಗದಗ ಜಿಲ್ಲೆಯ ಮುಂಡರಗಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಿದೆ.
ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಮ್ಯಾಟ್ ಪಂದ್ಯಾವಳಿಯು ಮುಂಡರಗಿಯ ಜಗದ್ಗುರು ಅನ್ನದಾನೇಶ್ವರ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ. ಆಸಕ್ತ ಕ್ರೀಡಾತಂಡಗಳು ನೋಂದಣಿ ಮಾಡಿಸಿಕೊಂಡು, ಪಂದ್ಯಾವಳಿಯಲ್ಲಿ ಭಾಗಿಯಾಗಬಹುದು ಎಂದು ಕ್ರೀಡಾ ಆಯೋಜಕರು ತಿಳಿಸಿದ್ದಾರೆ.
"ಮೊಬೈಲ್ಗೆ ಅಂಟಿಕೊಂಡಿರುವ ಯುವಜನ ಹೋರಾಂಗಣದ ಆಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ತೀರಾ ಕಡಿಮೆಯಾಗಿದೆ. ಅಂಕಗಳಿಕೆ ಕಡೆಗೆ ಹೆಚ್ಚು ಮಹತ್ವ ಕೊಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅಷ್ಟಕಷ್ಟೇ ಆಗಿದೆ. ದೇಶಿಯ ಮತ್ತು ಗ್ರಾಮೀಣ ಸೊಗಡಿನ ಕ್ರೀಡೆ ಕಬಡ್ಡಿಯನ್ನು ಆಡುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಯುವಜನರಲ್ಲಿ ಕ್ರೀಡಾಸಕ್ತಿ ಹೆಚ್ಚಿಸಲು ಪಂದ್ಯಾವಳಿ ಆಯೋಜಿಸಲಾಗಿದೆ" ಎಂದು ಕರವೇ ಜಿಲ್ಲಾಧ್ಯಕ್ಷ ಚಂದ್ರಶೇಖರ ಪೂಜಾರ್ ತಿಳಿಸಿದ್ದಾರೆ.
"ಕಬ್ಬಡ್ಡಿ ಕ್ರೀಡಾಪಟುಗಳು ಪಂದ್ಯಾವಳಿಯ ಸದುಪಯೋಗ ಪಡೆದುಕೊಳ್ಳಬೇಕು. ಪಂದ್ಯಾವಳಿಯಲ್ಲಿ ಎಲ್ಲ ಕನ್ನಡ ಮನಸ್ಸುಗಳು ಭಾಗವಹಿಸಿ, ಕಬಡ್ಡಿ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಿಸಬೇಕು" ಎಂದು ಅವರು ಕರೆ ನೀಡಿದ್ದಾರೆ.
ಪಂದ್ಯಾವಳಿ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಗುತ್ತದೆ ಎಂದು ಚಂದ್ರಶೇಖರ ತಿಳಿಸಿದ್ದಾರೆ.
ಬಹುಮಾನಗಳು ಹೀಗಿವೆ:
ಮೊದಲ ಸ್ಥಾನ : 30,000 ರೂ.
ಎರಡನೇ ಸ್ಥನ : 20,000 ರೂ.
ಮೂರನೇ ಸ್ಥಾನ: 10,000 ರೂ.
ನಾಲ್ಕನೇ ಸ್ಥಾನ: 7,000 ರೂ.
