ಇದು ನಮ್ಮ ಸೌಹಾರ್ದ | ಸಹಬಾಳ್ವೆಯ ಸಂಕೇತ ಸುರಪುರ: ತಹಶೀಲ್ದಾರ್ ಅಶೋಕ ಸುರಪುರಕರ

  • ಹಿಂದು-ಮುಸ್ಲಿಂ ಭಾವೈಕ್ಯತೆಯ ಸಂಕೇತ ಬಸವ ಜಯಂತಿ ಹಾಗೂ ರಂಝಾನ್‌
  • ಜಾತಿ, ಮತ, ಪಂಥ, ಕುಲವನ್ನು ಬಿಟ್ಟು ಎಲ್ಲರೂ ಒಂದೇ ಎಂದವರು ಬಸವಣ್ಣ

ಬಸವ ಜಯಂತಿ ಹಾಗೂ ರಂಝಾನ್‌ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಿರುವ ಯಾದಗಿರಿಯ ಹುಣಸಗಿ ಪಟ್ಟಣವು ಸಹಬಾಳ್ವೆಗೆ ಸಂಕೇತವಾಗಿದೆ ಎಂದು ಸುರಪುರದ ತಹಶೀಲ್ದಾರ್‌ ಅಶೋಕ್ ಸುರಪುರಕರ ಹೇಳಿದ್ದಾರೆ 

ಪಟ್ಟಣದ ತಾಲೂಕು ಕಛೇರಿಯಲ್ಲಿ ಹಮ್ಮಿಕೊಳ್ಳಲಾದ ಬಸವಣ್ಣನವರ 889ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ರಾಜ್ಯದಾದ್ಯಂತ ಹಿಂದು-ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಬಸವ ಜಯಂತಿ ಹಾಗೂ ರಂಝಾನ್‌ ಹಬ್ಬವು ಒಂದೇ ದಿನ ಜರುಗಿದೆ. ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಬ್ಬವನ್ನು ಆಚರಿಸಲಾಗಿದೆ" ಎಂದು ಹೇಳಿದ್ದಾರೆ. 

Eedina App

"ಬಸವೇಶ್ವರರು ಹಾಕಿಕೊಟ್ಟ ಮಾರ್ಗದಲ್ಲಿ ಹುಣಸಗಿ ಪಟ್ಟಣದ ಜನತೆ ನಡೆದುಕೊಂಡು ಹೋಗುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಶಾಂತಿ ಸೌಹಾರ್ದತೆಯಿಂದ ಕೂಡಿ ಬಾಳಿ ಸಹೋದರತ್ವ ಭಾವನೆಗಳನ್ನು ಬೆಳೆಸಿಕೊಂಡು ಹೋಗಬೇಕು" ಎಂದು ಅವರು ಮನವಿ ಮಾಡಿದ್ದಾರೆ. 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಐ.ಬಿ.ಹಿರೇಮಠ ಮಾತನಾಡಿ, "ವಿಶ್ವಗುರು ಬಸವಣ್ಣ ಜಾತಿ, ಮತ, ಪಂಥ, ಕುಲವನ್ನು ಬಿಟ್ಟು ಪ್ರತಿಯೊಬ್ಬರು ಒಂದೇ ಎಂಬ ಭಾವನೆಗಳನ್ನು ಬೆಳೆಸಿಕೊಳ್ಳಬೇಕೆಂದು ಸಾರಿದರು. ನಾವೆಲ್ಲರೂ ಅದೇ ಹಾದಿಯಲ್ಲಿ ನಡೆದಾಗ ಮಾತ್ರ ಅವರ ತತ್ವಗಳನ್ನು ಪಾಲಿಸಿದಂತಾಗುತ್ತದೆ" ಎಂದು ತಿಳಿಸಿದ್ದಾರೆ. 

AV Eye Hospital ad

ಬಸವಣ್ಣನವರ ಜಯಂತೋತ್ಸದ ಭಾಗವಾಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಗಿದ್ದು, ಇದೇ ವೇಳೆ ರಂಝಾನ್‌ ಪ್ರಯುಕ್ತ ಪ್ರಾರ್ಥನೆಗೆ ತೆರಳುತ್ತಿದ್ದ ಮುಸ್ಲಿಮರ ಕೈ ಕುಲುಕಿ, ಪರಸ್ಪರ ಹಬ್ಬದ ಶುಭಾಶಯ ಕೋರಿದರು.  

ಮಾಸ್‌ ಮೀಡಿಯಾ ಯಾದಗಿರಿ ವಲಯ ಸ್ವಯಂಸೇವಕ ಬಾಪುಗೌಡ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
2 ವೋಟ್
eedina app