ತುಮಕೂರು| ಸ್ವಾತಂತ್ರ್ಯೋತ್ಸವದ ಫ್ಲೆಕ್ಸ್‌ನಲ್ಲಿ'ಗಾಂಧೀಜಿ'ಯೊಂದಿಗೆ ಪ್ರತ್ಯಕ್ಷವಾದ 'ಗೋಡ್ಸೆ' ಫೋಟೊ; ಆಕ್ರೋಶ

Tumkur
  • ಕಿಡಿಗೇಡಿಗಳ ಕೆಲಸವೆಂದು ಸ್ಥಳೀಯ ಆಡಳಿತ ಸ್ಪಷ್ಟನೆ
  • ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಘಟನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧೆಡೆ ಸ್ವಾತಂತ್ರ್ಯ ಹೋರಾಟಗಾರರ ಫ್ಲೆಕ್ಸ್‌ ಹಾಕಿ ಶುಭಕೋರಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಫ್ಲೆಕ್ಸ್‌ವೊಂದರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಫೋಟೋ ಜೊತೆಗೆ ಅವರನ್ನು ಹತ್ಯೆ ಮಾಡಿದ ಗೋಡ್ಸೆ ಪೋಟೊ ಹಾಕಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಮಧುಗಿರಿ ಡಿ ಎಂ ಬಡಾವಣೆಯ ಭಗತ್‌ ಸಿಂಗ್‌ ಅಸೋಸಿಯೇಷನ್‌ ಎಂದು ಫ್ಲೆಕ್ಸ್‌ ಕೆಳಗಡೆ ಬರೆಯಲಾಗಿದೆ. ಸಾಮಾಜಿಕ ತಾಣದಲ್ಲಿ ಈ ಪೋಟೋ ಹಂಚಿಕೊಂಡಿದ್ದು, ಗೋಡ್ಸೆಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ಫ್ಲೆಕ್ಸ್‌ ಅಳವಡಿಸಿದವರನ್ನು ತಕ್ಷಣ ಬಂಧಿಸುವಂತೆ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಪಾಲಿಕೆಯಿಂದ ನಗರದಾದ್ಯಂತ ಫ್ಲೆಕ್ಸ್‌ ತೆರವು ಕಾರ್ಯಾಚರಣೆ

ಫ್ಲೆಕ್ಸ್‌ನ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದೆ. ಈ ಬಡಾವಣೆಯಲ್ಲಿ ಇಂತಹ ಹೆಸರಿನ ಯಾವ ಸಂಘಟನೆಯೂ ಇಲ್ಲ. ಯಾರೋ ಕಿಡಿಗೇಡಿಗಳು ವಿವಾದ ಎಬ್ಬಿಸಲೆಂದೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಾವರ್ಕರ್ ಫ್ಲೆಕ್ಸ್ ವಿಷಯಕ್ಕೆ ಶಿವಮೊಗ್ಗದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳೂರಿನಲ್ಲಿಯೂ ಸಾವರ್ಕರ್ ಫೋಟೋವನ್ನು  ‘ಸ್ವಾತಂತ್ರ್ಯ ವೀರ’ ಎಂಬ ಹೆಸರಿನಲ್ಲಿ ಫ್ಲೈಓವರ್ ಕೆಳಗಡೆ ಕಿಡಿಗೇಡಿಗಳು ಅಂಟಿಸಿದ್ದು, ನಂತರ ಅಧಿಕಾರಿಗಳು ತೆಗೆಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್