ತುಮಕೂರು | ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ಕ್ಷಣಾರ್ಧದಲ್ಲಿ ರಕ್ಷಿಸಿದ ಸ್ಥಳೀಯರು

  • ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕ, ಯುವಕ ಪಾರು
  • ತಿಮ್ಲಾಪುರ ಕೆರೆ ಕೋಡಿಯಲ್ಲಿ ಮೀನಿಗಾಗಿ ಮುಗಿಬಿದ್ದ ಮಂದಿ

ಅತಿಯಾದ ಮಳೆಯಿಂದ ಎಲ್ಲೆಡೆ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ತುಮಕೂರು ಜಿಲ್ಲೆಯಲ್ಲಿ ಭೋರ್ಗರೆಯುತ್ತಿರುವ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕ ಮತ್ತು ಯುವಕನನ್ನು ಸ್ಥಳೀಯರು ಕ್ಷಣಾರ್ಧದಲ್ಲಿ ರಕ್ಷಿಸಿದ್ದಾರೆ.

ತುಮಕೂರು ಗ್ರಾಮಾಂತರ ತಾಲೂಕಿನ ಗೂಳೂರು ಕೆರೆ ತುಂಬಿ ಕೋಡಿ ಬಿದ್ದಿದ್ದು, ನೀರಿನಲ್ಲಿ ಆಟ ಆಡಲು ಬಂದಿದ್ದ ಯುವಕರ ಹುಡುಗಾಟದಿಂದ ಈ ಘಟನೆ ಸಂಭವಿಸಿದೆ.

ಈ ಸುದ್ದಿ ಓದಿದ್ದೀರಾ? ವಿಜಯಪುರ | ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಸಂಚರಿದ ಬಸ್‌: ತಪ್ಪಿದ ಭಾರಿ ಅನಾಹುತ

ವೇಗವಾದ ನೀರಿನ ರಭಸದಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕ ಮತ್ತು ಯುವಕನನ್ನು ಸ್ಥಳೀಯರು ಕೂದಲೆಳೆ ಅಂತರದಲ್ಲಿ ರಕ್ಷಿಸಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಚಿಕ್ಕನಾಯಕನಹಳ್ಳಿ ತಾಲೂಕು

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಲಾಪುರ ಕೆರೆ ಕೋಡಿಯ ನೀರಿನಲ್ಲಿ ಹೊರಗೆ ಬರುತ್ತಿರುವ ಮೀನುಗಳಿಗಾಗಿ ಸ್ಥಳೀಯರು ಮುಗಿ ಬಿದ್ದಿದ್ದಾರೆ.

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ತಿಮ್ಲಾಪುರ ಕೆರೆ ಕೋಡಿ ಬಿದ್ದಿದ್ದು, ಮಕ್ಕಳು ಮಹಿಳೆಯರು ಮೀನು ಹಿಡಿಯಲು ಮುಗಿಬಿದ್ದಿದ್ದಾರೆ. ಪ್ಲಾಸ್ಟಿಕ್ ಚೀಲ ತಂದು ಮೀನುಗಳನ್ನು ತುಂಬಿಕೊಳ್ಳುವಲ್ಲಿ ಹರಸಾಹಸ ಪಡುತ್ತಿರುವುದು ಕಂಡು ಬಂದಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
AV Eye Hospital ad