ತುಮಕೂರು | ಅರುಂಧತಿ ಸಿನಿಮಾ ನೋಡಿ ಪ್ರೇರಿತನಾದ ಯುವಕ: ಆತ್ಮಹತ್ಯೆಗೆ ಯತ್ನ

  • ಸಿನಿಮಾದಲ್ಲಿ ನಾಯಕಿಗೆ ದಿವ್ಯಶಕ್ತಿ ಬರುವ ದೃಶ್ಯದಿಂದ ಪ್ರಭಾವಿತನಾದ ಯುವಕ
  • ನನಗೆ ಮುಕ್ತಿ ಬೇಕು, ದಿವ್ಯಶಕ್ತಿ ಬೇಕು ಎಂದು ಹೇಳುತ್ತಾ ಆತ್ಮಹತ್ಯೆಗೆ ಯತ್ನ

ಯುವಕನೊಬ್ಬ ತೆಲುಗು ಭಾಷೆಯ ಅರುಂಧತಿ ಸಿನಿಮಾದ ದೃಶ್ಯವೊಂದರಿಂದ ಪ್ರೇರಿತನಾಗಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. 

ಜಿಲ್ಲೆಯ ಮಧುಗಿರಿ ತಾಲೂಕಿನ ಗಿಡ್ಡಯ್ಯನ ಪಾಳ್ಯದಲ್ಲಿ ರೇಣುಕ (22) ಎಂಬ ಯುವಕ ಅರುಂಧತಿ ಸಿನಿಮಾ ನೋಡಿ ಪ್ರಭಾವಿತನಾಗಿದ್ದಾನೆ. ಬಳಿಕ ತನಗೂ ಕೂಡ ದಿವ್ಯಶಕ್ತಿ ಬರಬೇಕೇಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಅರುಂಧತಿ ಸಿನಿಮಾದಲ್ಲಿ ನಾಯಕಿ ಮುಕ್ತಿ ಪಡೆಯಲು ತನ್ನನ್ನು ತಾನು ದಹಿಸಿಕೊಂಡು, ಬಳಿಕ ಆತ್ಮವಾಗಿ ಬಂದು ಖಳನಾಯಕನನ್ನು ಕೊಲ್ಲುತ್ತಾಳೆ. ಈ ವೇಳೆ ನಾಯಕಿಗೆ ದಿವ್ಯಶಕ್ತಿ ಬರುವ ದೃಶ್ಯದಿಂದ ರೇಣುಕ ಪ್ರಭಾವಿತನಾಗಿದ್ದಾನೆ ಎಂದು ತಿಳಿದು ಬಂದಿದೆ.  

ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಶಾಸಕ ಯು ಟಿ ಖಾದರ್‌ಗೆ ರಾಜ್ಯ ಮುಸ್ಲಿಂ ಲೇಖಕರ ಸಂಘದಿಂದ ಸನ್ಮಾನ

ಯುವಕ ತನಗೂ ಮುಕ್ತಿ ಬೇಕು, ದಿವ್ಯಶಕ್ತಿ ಬೇಕು ಎಂದು ಹೇಳುತ್ತಾ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾನೆ. ಇದನ್ನು ಗಮನಿಸಿದ ಪೋಷಕರು ತಕ್ಷಣ ಬೆಂಕಿ ನಂದಿಸಿ ಮಧುಗಿರಿ ಹಾಗೂ ತುಮಕೂರಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. 

ಯುವಕ ಬೆಂಕಿ ಹಚ್ಚಿಕೊಂಡ ವೇಳೆ ‘ನನಗೆ ಮುಕ್ತಿ ಬೇಕು, ಮುಕ್ತಿ ಬೇಕು’ ಎಂದು ನರಳಾಡುತ್ತಿದ್ದನು ಎಂದು ಆತನ ಪೋಷಕರು ಹೇಳಿರುವುದಾಗಿ ತಿಳಿದು ಬಂದಿದೆ. 

ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.
ನಿಮಗೆ ಏನು ಅನ್ನಿಸ್ತು?
0 ವೋಟ್