ಉಡುಪಿ | ಸಂಕ ದಾಟುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ಬಾಲಕಿ ಸಾವು

Udupi
  • ಎರಡನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಸನ್ನಿಧಿ
  • ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅನಾಹುತ

ಬಾಲಕಿಯೋರ್ವಳು ಸಂಕ ದಾಟುವಾಗ ಆಯತಪ್ಪಿ ಹಳ್ಳಿಕ್ಕೆ ಬಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಸಮೀಪ ನಡೆದಿದೆ.

ಬೊಳಂಬಳ್ಳಿ ಗ್ರಾಮದ ಬಾಲಕಿ ಸನ್ನಿಧಿ (7) ಮೃತ ದುರ್ದೈವಿ. ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆ, ಶಾಲೆಯಿಂದ ಮನೆಗೆ ಮರಳುವಾಗ ಘಟನೆ ನಡೆದಿದೆ.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ತೀವ್ರ ಜ್ವರಕ್ಕೆ ಬಲಿಯಾದ ಖೋ-ಖೋ ಕ್ರೀಡಾಪಟು

ಉಡುಪಿ ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಹಳ್ಳ, ತೋಡು, ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಸಂಜೆ ಶಾಲೆ ಮುಗಿಸಿ ಮನೆಗೆ ತೆರಳುತ್ತಿರುವ ವೇಳೆ ಬಿಜಮಕ್ಕಿ ಎಂಬಲ್ಲಿ ಸಂಕ ದಾಟುವಾಗ ಕಾಲು ಜಾರಿ ಬಾಲಕಿ ಹಳ್ಳಕ್ಕೆ ಬಿದ್ದಿದ್ದಾಳೆ. ತಕ್ಷಣ ಸ್ಥಳಕ್ಕೆ ಬಂದ ಗ್ರಾಮಸ್ಥರು ಬಾಲಕಿಗಾಗಿ ಹುಡುಗಾಟ ನಡೆಸಿದರು ಯಾವುದೇ ಪ್ರಯೋಜನವಾಗಲಿಲ್ಲ.

ನೀರಿನ ಮಟ್ಟ ಹೆಚ್ಚಿದ್ದು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಜೋಕಾಲಿ ಹಗ್ಗ ಕೊರಳಿಗೆ ಸಿಲುಕಿ ಬಾಲಕಿ ಸಾವು

ಜೋಕಾಲಿ ಆಡುತ್ತಿರುವ ವೇಳೆ ಹಗ್ಗ ಕೊರಳಿಗೆ ಸುತ್ತಿಕೊಂಡು ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಅನಂತಾಡಿಯಲ್ಲಿ ಸೋಮವಾರ ನಡೆದಿದೆ. 

ಮೃತ ಬಾಲಕಿ ಲಿಖಿತಾ (11) ಬಾಬನಕಟ್ಟೆ ಶಾಲೆಯ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app