ಬೆಳಗಾವಿ: ಇಂಗಳಿ ಗ್ರಾಮದಲ್ಲಿ ಹಿಂದು-ಮುಸ್ಲಿಂ ಭಾವೈಕ್ಯದ ಯುಗಾದಿ

  • ಕೃಷ್ಣ ನದಿಗೆ ಹಿಂದು-ಮುಸ್ಲಿಂ ಒಟ್ಟಿಗೆ ಬಾಗಿನ ಅರ್ಪಿಸುವುದು ವಿಶೇಷ 
  • ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಇಂಗಳಿಯಲ್ಲಿ ಸಾಮರಸ್ಯದ ಯುಗಾದಿ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಹಿಂದು-ಮುಸ್ಲಿಂ ಕುಟುಂಬಗಳೆಲ್ಲ ಕೃಷ್ಣ ನದಿ ತೀರದಲ್ಲಿ ಮಿಂದು, ನದಿಗೆ ಬಾಗಿನ ಅರ್ಪಿಸುವ ಮೂಲಕ ವಿಶೇಷವಾಗಿ ಯುಗಾದಿ ಹಬ್ಬ ಆಚರಿಸುತ್ತಾರೆ.

ಯುಗಾದಿ ಹಬ್ಬದ ಮೊದಲ ದಿನವಾದ ಅಮಾವಾಸ್ಯೆಯಂದು ಪ್ರತಿ ವರ್ಷ ಗ್ರಾಮದ ಪ್ರತಿ ಮನೆಯ ಸದಸ್ಯರು ಬಗೆಬಗೆಯ ಅಡುಗೆ ಮಾಡಿಕೊಂಡು ಅವುಗಳೊಂದಿಗೆ ಕೃಷ್ಣ ನದಿ ತೀರಕ್ಕೆ ತೆರಳಿ ಬಾಗಿನ ಅರ್ಪಿಸುತ್ತಾರೆ. ಬಾಗಿನ ಅರ್ಪಿಸಿದ ಮರು ದಿನ ನಸುಕಿನಲ್ಲಿ ಹಳ್ಳಿಯ ಜನರೆಲ್ಲ ಕೃಷ್ಣ ನದಿಯಲ್ಲಿ ಸ್ನಾನ ಮಾಡುತ್ತಾರೆ.

 

ಗ್ರಾಮದಲ್ಲಿ ಹಿಂದು-ಮುಸ್ಲಿಂ ಬೇದ ಇಲ್ಲ. ಯುಗಾದಿ ಹಬ್ಬವಷ್ಟೇ ಅಲ್ಲದೆ ಗ್ರಾಮಸ್ಥರು ಒಂದಾಗಿ ಬಸವಣ್ಣನ ಜಾತ್ರೆ, ದಸರಾ ಉತ್ಸವ, ದುರ್ಗಾಪೂಜೆ, ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ. ಪ್ರತಿ ಅಮಾವಾಸ್ಯೆ, ಸೋಮವಾರಗಳಂದು ಕೃಷ್ಣ ನದಿಗೆ ಹಿಂದುಗಳಂತೆ ಮುಸ್ಲಿಮರೂ ನೈವೇದ್ಯ ಅರ್ಪಿಸುತ್ತಾರೆ. ಮಕ್ಕಳ ಮದುವೆ ಕಾರ್ಯಕ್ರಮಗಳಲ್ಲೂ ಹಿಂದು-ಮುಸ್ಲಿಂ ಎನ್ನದೇ ಎಲ್ಲರೂ ಒಂದಾಗಿ ಅಣ್ಣ- ತಮ್ಮಂದಿರಂತೆ ನೆರವೇರಿಸುತ್ತಾರೆ.

ರಾಜ್ಯದ ಹಲವೆಡೆ ಸಮಾಜದ ನಾನಾ ಸಮುದಾಯಗಳಲ್ಲಿ ಶಾಂತಿ ಕದಡುವ  ವಾತಾವರಣ ಇರುವ ಇಂಥ ಸಂದರ್ಭದಲ್ಲಿ ಇಂಗಳಿ ಗ್ರಾಮದ ಹಿಂದು-ಮುಸ್ಲಿಂ ಯುಗಾದಿ ಆಚರಣೆ ಸೌಹಾರ್ದದ ಸಂದೇಶವನ್ನು ನೀಡುತ್ತದೆ.

 

ನಿಮಗೆ ಏನು ಅನ್ನಿಸ್ತು?
6 ವೋಟ್
eedina app