ಉತ್ತರ ಕನ್ನಡ | ಅನಂತಕುಮಾರ್ ಹೆಗಡೆಯಂತಹ ಶತಮೂರ್ಖ ಇನ್ನೊಬ್ಬರಿಲ್ಲ: 40% ಸರ್ಕಾರಕ್ಕೆ ಶವ ರಾಜಕಾರಣ ಮಾತ್ರ ಗೊತ್ತಿದೆ: ಐವಾನ್ ಡಿಸೋಜಾ ಕಿಡಿ

  • ಪರೇಶ್ ಮೇಸ್ತ ಸಾವಿನ ಕುರಿರು ಜನಜಾಗೃತಿ ಸಭೆ
  • 'ಸಂಸದ ಹೆಗಡೆಗೆ ಗ್ರಾಮ ಪಂ. ಸದಸ್ಯನಾಗುವ ಅರ್ಹತೆಯಿಲ್ಲ'

ಅಮಾಯಕ ಪರೇಶ್ ಮೇಸ್ತಾ ಹೆಣದ ಮೇಲೆ ರಾಜಕೀಯ ಮಾಡಿದ ಶಾಸಕ, ಸಚಿವ, ಸಂಸದರುಗಳು ಈ ಸಾವಿನ ಫಲಾನುಭವಿಗಳಾಗಿದ್ದಾರೆ. ಸಂಸದ ಅನಂತ್ ಕುಮಾರ್ ಹೆಗಡೆಯಂತಹ ಶತಮೂರ್ಖ ರಾಜಕಾರಣಿ ಈ ದೇಶದಲ್ಲಿ ಮತ್ತೊಬ್ಬರಿಲ್ಲ. 40% ಕಮಿಷನ್ ಹೊಡೆಯುವ ಬಿಜೆಪಿ ಸರ್ಕಾರಕ್ಕೆ ಸಾವಿನ ಮನೆಯಲ್ಲಿ ರಾಜಕಾರಣ ಮಾಡುವುದು ಮಾತ್ರ ಗೊತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಆರೋಪಿಸಿದ್ದಾರೆ.

ಹೊನ್ನಾವರ ಪಟ್ಟಣದಲ್ಲಿ ಪರೇಶ್ ಮೇಸ್ತ ಸಾವಿನ ಕುರಿತಂತೆ ಜನಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. "ದೇಶದ ಜನರ ಶಾಂತಿ ನಾಶ ಮಾಡಲು ಬಿಜೆಪಿ ಹೊರಟಿದೆ. ಸಂಸದ ಅನಂತ್ ಕುಮಾರ್ ಹೆಗಡೆ ಹನಿ ಹನಿ ರಕ್ತಕ್ಕೂ ನ್ಯಾಯ ಕೊಡಿಸುತ್ತೇನೆ ಎಂದಿದ್ದರು. ಅನಂತ್ ಕುಮಾರ್ ಹೆಗಡೆಯಂತಹ ಶತಮೂರ್ಖ ರಾಜಕಾರಣಿ ಈ ದೇಶದಲ್ಲಿ ಮತ್ತೊಬ್ಬರಿಲ್ಲ. ಕೊಮುಗಲಭೆಗೆ ಪ್ರೇರೆಪಿಸುವ ಓರ್ವ ಗ್ರಾಮ ಪಂಚಾಯಿತಿ ಸದಸ್ಯನಾಗಲು ಅರ್ಹನಲ್ಲದ ವ್ಯಕ್ತಿ" ಎಂದು ಟೀಕಿಸಿದರು. 

Eedina App

"232 ಜನ ಅಮಾಯಕ ಯುವಕರನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸಿದ ಖ್ಯಾತಿ ಬಿಜೆಪಿಗಿದೆ. ಬಿಜೆಪಿಗರು ಜನರ ಮುಂದೆ ಎಷ್ಟೇ ಡೋಂಗಿ ಮಾಡಿದರು ಅದು ಕ್ಷಣಿಕ ಮಾತ್ರ" ಎಂದು ಬಿಜೆಪಿ ವಿರುದ್ದ ಹರಿಹಾಯ್ದದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, "ಬಿಜೆಪಿಗರು ಹಿಂದಿನ ಚುನಾವಣೆಯ ಸಮಯದಲ್ಲಿ ಜಿಲ್ಲೆಯಲ್ಲಿ ಕೋಮು ಗಲಭೆಯ ಕಿಚ್ಚು ಹಚ್ಚಿದ್ದರು‌. ಈ ಮೂಲಕ ಸಾವಿನ ಮೇಲೆ ರಾಜಕೀಯ ಮಾಡಿ ಶಾಸಕರಾಗಿದ್ದರು. ಸಿಬಿಐ ವರದಿ ನಂತರವಾದರು ನೈತಿಕತೆ ಹೊತ್ತು ರಾಜೀನಾಮೆ ನೀಡಲಿ. ದೊಂಬಿ ಮಾಡಿ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿ ಮಾಡಿದ್ದರು. ಸುಳ್ಳು ಆರೋಪ ಹೊರಿಸಿ ಕಾಂಗ್ರೆಸ್‌ಗೆ ಕಳಂಕ ತರುವ ರೀತಿಯ ವರ್ತನೆ ಮಾಡಿದ್ದರು. ಬಿಜೆಪಿಗರು ಈಗ ಜನರ ಮುಂದೆ ಬೆತ್ತಲಾಗಿದ್ದಾರೆ" ಎಂದು ಕಿಡಿಕಾರಿದರು.

AV Eye Hospital ad

ರೈತರು ಅತಿವೃಷ್ಟಿಯಿಂದ ತೀರಾ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸಲು ಮುಂದಾಗಿಲ್ಲ. ಬಿಜೆಪಿ ಕೇವಲ 40% ಕಮಿಷನ್ ಆಸೆಗೆ ಸೀಮಿತವಾಗಿದೆ. ತಾವು ಕ್ಷೇತ್ರಕ್ಕೆ ಅನುದಾನ ಎಷ್ಟು ತಂದಿರುವೆ ಎಂದು ಧೈರ್ಯವಾಗಿ ಹೇಳುವ ತಾಕತ್ತು ಒಬ್ಬ ಶಾಸಕರಿಗೂ ಇಲ್ಲ. ಜನತೆ ನೆಮ್ಮದಿಯಿಂದ ಬದುಕಬೇಕಾದರೆ ಇಂತಹ ದುಷ್ಟ, ದ್ರೋಹಿಗಳಿಂದ ಜನರು ದೂರ ಇರಬೇಕಾಗಿದೆ" ಎಂದರು.

ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ "ಇಲ್ಲಿನ ಬಿಜೆಪಿ ಶಾಸಕ, ಸಂಸದರು ದ್ವೇಷದ ಕಿಚ್ಚನ್ನು ಹಚ್ಚಿ ರಾಜಕಾರಣ ಮಾಡುತ್ತಿದ್ದಾರೆ. ಅವರು ಈಗ ಜನರಿಗೆ ಉತ್ತರ ನೀಡಲು ಆಗುತ್ತಿಲ್ಲ. ಗಲಭೆಯಲ್ಲಿ ಅನೇಕ ಯುವಕರ ಭವಿಷ್ಯ ಹಾಳಾಗಿದೆ. ಬಿಜೆಪಿಗರಿಂದ ಪರೇಶ್ ಕುಟುಂಬಕ್ಕೆ ಧಮ್ಕಿ ಇದೆ, ಪರೇಶ್ ಕುಟುಂಬಕ್ಕೆ ರಕ್ಷಣೆ ನೀಡಬೇಕು" ಎಂದರು‌.

ಈ ಸುದ್ದಿ ಓದಿದ್ದೀರಾ?: ಭಟ್ಕಳ | ಬಿಜೆಪಿ ಜಿಲ್ಲೆಯ ಜನತೆಯ ಕ್ಷಮೆ ಕೇಳಲಿ: ಕಾಂಗ್ರೆಸ್ ಮುಖಂಡ ಸಂತೋಷ್ ನಾಯ್ಕ

ಮಾಜಿ ಶಾಸಕ ಸತೀಶ್ ಸೈಲ್ ಮಾತನಾಡಿ, "ಪರೇಶ್ ಪ್ರಕರಣ ಬಿ-ರಿಪೋರ್ಟ್ ಆದ ಮೇಲೆ ಬಿಜೆಪಿಗರಿಗೆ ಮಾತೆ ಹೊರಡದಂತಾಗಿದೆ. ಇಲ್ಲಿನ ಉಸ್ತುವಾರಿ ಸಚಿವರು ಈ ವರದಿಯನ್ನು ಒಪ್ಪುವುದಿಲ್ಲ ಎನ್ನುತ್ತಾರೆ. ಆದರೆ ಜನರು ಈ ವರದಿಯನ್ನು ಒಪ್ಪಿದ್ದಾರೆ" ಎಂದರು. 

ಸಭೆಯಲ್ಲಿ ಮಾಜಿ ಶಾಸಕ ಜೆ.ಡಿ ನಾಯ್ಕ, ಕಾಂಗ್ರೆಸ್‌ ಮುಖಂಡ ಮಂಜುನಾಥ ನಾಯ್ಕ, ರತ್ನಾಕರ ನಾಯ್ಕ, ಎಮ್ ಎನ್ ಸುಬ್ರಹ್ಮಣ್ಯ, ರಮಾನಂದ ನಾಯ್ಕ, ಸುಜಾತಾ ಗಾಂವ್ಕರ್, ಜಯಶ್ರಿ ಮೊಗೇರ್, ಬಸವರಾಜ ದೊಡ್ಮನಿ,‌ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ, ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app