ರಕ್ಷಣೆಗಾಗಿ ಹಿಂದೂಗಳು ಮನೆಯಲ್ಲಿ ತಲವಾರು ಇಟ್ಟುಕೊಳ್ಳಬೇಕು: ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ

uttara kannada
  • ಸಾರ್ವಕರ್‌ಗೆ ಅವಮಾನ ಮಾಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು
  • ಬಿಜೆಪಿ ಪಕ್ಷವನ್ನು ನಂಬಿದರೆ ಹಿಂದೂಗಳಿಗೆ ಯಾವುದೇ ಪ್ರಯೋಜನವಿಲ್ಲ

“ಸ್ವಾತಂತ್ರ್ಯ ದಿನದಂದು ಹಿಂದೂಗಳು ದೇಶದ ವಿಭಜನೆಯ ಕರಾಳತೆಯನ್ನು ನೆನಪಿಸಿಕೊಳ್ಳಬೇಕು. ಹಿಂದೂ ಸಮುದಾಯದವರು ಕ್ಷತ್ರಿಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಮ್ಮ ರಕ್ಷಣೆಗಾಗಿ ಮನೆಯಲ್ಲಿ ತಲವಾರು ಇಟ್ಟುಕೊಳ್ಳಬೇಕು” ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಅಂಜನಾದ್ರಿ ದೇವಸ್ಥಾನದಲ್ಲಿ ಜಾಗೃತ ನಾಗರಿಕರ ವೇದಿಕೆ ಮತ್ತು ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಹೇಳಿಕೆ ನೀಡಿದ್ದಾರೆ. 

“ಬಿಜೆಪಿ ಪಕ್ಷವನ್ನು ನಂಬಿದರೆ ಹಿಂದೂಗಳಿಗೆ ಯಾವುದೇ ಪ್ರಯೋಜನವಿಲ್ಲ. ಹಿಂದೂ ವಿರೋಧಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಂಬಿಸುತ್ತಾರೆ ಅಷ್ಟೇ. ಹಿಂದೂಗಳು ಒಗ್ಗಟ್ಟಾಗಿ ಇರಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು| ಕಾಂಗ್ರೆಸ್‌ ಸ್ವಾತಂತ್ರ್ಯನಡಿಗೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗಿ

“ಕಾಂಗ್ರೆಸ್‌ನವರಿಗೆ ದೇಶದ್ರೋಹಿಗಳು ಯಾರು? ದೇಶಪ್ರೇಮಿಗಳು ಯಾರು ಎಂಬ ಕನಿಷ್ಠ ಜ್ಞಾನವಿಲ್ಲ. ಅದಕ್ಕೆ ಟಿಪ್ಪುವಿನಂತಹ ಹಿಂದೂ ವಿರೋಧಿಯನ್ನು ಕಂಡರೆ ಹೊಗಳುತ್ತಾರೆ. ಹಿಂದೂ ಸಮಾಜದ ಉದ್ದಾರಕ ಸಾರ್ವಕರ್‌ನನ್ನು ಕಂಡರೆ ಉರಿದು ಬೀಳುತ್ತಾರೆ” ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

“ಮೊದಲಿಗೆ ಕೇಸರಿ ಬಣ್ಣವೇ ರಾಷ್ಟ್ರಧ್ವಜವಾಗಿತ್ತು. ಗಾಂಧೀಜಿ ಅದನ್ನು ಬದಲಾಯಿಸಿ ತ್ರಿವರ್ಣ ಧ್ವಜವನ್ನು ರಾಷ್ಟ್ರ ಧ್ವಜವನ್ನಾಗಿ ಮಾಡಿದರು. ಆಗಿನ ಗಾಂಧಿಯಿಂದ ಹಿಡಿದು ಈಗಿನ ಸಿದ್ದರಾಮಯ್ಯನವರೆಗೂ ಕೇಸರಿ ಧ್ವಜ ಕಂಡರೆ ಆಗದು” ಎಂದು ಹೇಳಿದರು.

ಸಾರ್ವಕರ್ ಪೋಟೋಗೆ ಅವಮಾನ ಮಾಡಿದ ಮುಸ್ಲಿಂ ಗೂಂಡಾಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ದೇಶಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 75 ವರುಷ ಕಳೆಯಿತು. ಆದರೂ ಹಿಂದೂಗಳಿಗಾಗಿ ಹೋರಾಡುವ ನನ್ನಂತಹ ವ್ಯಕ್ತಿಗೆ ರಾಜ್ಯದ 21 ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ನೆರೆಯ ಗೋವಾಕ್ಕೆ ಎಂಟು ವರ್ಷದಿಂದ ನನಗೆ ಪ್ರವೇಶವನ್ನೇ ನೀಡುತ್ತಿಲ್ಲ' ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್